ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ದೀಪಾವಳಿ ಪಟಾಕಿ ಸಿಡಿಸಲು ಅವಕಾಶ : ಸಚಿವ ರಾಮಲಿಂಗಾರೆಡ್ಡಿ – vishwanews24
ಈ ಬಾರಿ ದೀಪಾವಳಿ ಪಟಾಕಿ ಸಿಡಿಸಲು 2 ಗಂಟೆ ಅವಕಾಶ: ನಿಯಮ ಮೀರಿದರೆ ಕಠಿಣ ಕ್ರಮ ಎಂದ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ಸುಪ್ರೀಂಕೋರ್ಟ್ ಕೂಡ ಪಟಾಕಿ ಸಿಡಿಸುವ ಸಂಬಂಧ ಕೆಲವು ನಿರ್ದೇಶನಗಳನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಹಸಿರು ಪಟಾಕಿಗಳಷ್ಟೇ ಕಡ್ಡಾಯ..
ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಚಿವರು ಮಾಲಿನ್ಯ ನಿಯಂತ್ರಣ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ದೀಪಾವಳಿ ಹಬ್ಬದ ದಿನಗಳಲ್ಲಿ ರಾತ್ರಿ 8:00 ರಿಂದ 10:00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅನುಮತಿ ಇರುತ್ತದೆ.
ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ – vishwanews24
ಉಳಿದ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದ ಸಚಿವ ರಾಮಲಿಂಗಾರೆಡ್ಡಿ, “ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರಕ್ಕೆ ಹಾನಿಯಾಗದಂತೆ ಮಾರುಕಟ್ಟೆಯಲ್ಲಿ ಕೇವಲ ಪರಿಸರ ಸ್ನೇಹಿ ‘ಹಸಿರು ಪಟಾಕಿ’ಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಬಳಸಲು ಅನುಮತಿ ನೀಡಲಾಗಿದೆ. ನಿಷೇಧಿತ ರಾಸಾಯನಿಕಯುಕ್ತ ಹಾಗೂ ಅಧಿಕ ಶಬ್ದದ ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಮೊಸರಿನ ದರ ಲೀಟರ್ಗೆ 14 ರೂ. ಹೆಚ್ಚಳ; ನ.1 ರಿಂದ ಜಾರಿಗೆ : ಕೆಎಂಎಫ್ ಆದೇಶ – vishwanews24
