ರೂಪಾಂತರಿ ಕೊರೊನಾ ಒಮಿಕ್ರೋನ್ ಪತ್ತೆ : ರಾಜ್ಯದಲ್ಲಿ ಮುನ್ನಚ್ಚರಿಕೆ ಕ್ರಮ : ಸುಧಾಕರ್ – Vishwanews24
ರೂಪಾಂತರಿ ಕೊರೊನಾ ಒಮಿಕ್ರೋನ್ ಪತ್ತೆ : ರಾಜ್ಯದಲ್ಲಿ ಮುನ್ನಚ್ಚರಿಕೆ ಕ್ರಮ : ಸುಧಾಕರ್ – Vishwanews24
ಬೆಂಗಳೂರು: “ನಾಲ್ಕು ದೇಶಗಳಲ್ಲಿ ರೂಪಾಂತರಿ ಒಮಿಕ್ರೋನ್ ಪತ್ತೆಯಾಗಿದೆ. ತೀವ್ರತೆ ಬಗ್ಗೆ ವಿಶ್ವಸಂಸ್ಥೆಯಿಂದ ಅಧ್ಯಯನ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ” ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
“ರೂಪಾಂತರಿ ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೇ ಮಾಹಿತಿ ನೀಡಿದೆ ಎಂದಿದ್ದಾರೆ. ಈ ಬಗ್ಗೆ ಯಾರೂ ಭಯಡುವ ಅಗತ್ಯ ಇಲ್ಲ. ಎಚ್ಚರಿಕೆಯ ಅಗತ್ಯವಿದೆ” ಎಂದಿದ್ದಾರೆ.
“ವಿದೇಶದಿಂದ ಬರುವವರಿಗೆ ಕೊರೊಸಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿಯೂ ಪ್ರಕಟಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಟೆಸ್ಟ್ ಕಡ್ಡಾಯವಾಗಿದ್ದು, ನೆಗೆಟಿವ್ ಬಂದರೂ ಸಹ ಒಂದು ವಾರ ಹೋಂ ಕ್ವಾರಂಟೈನ್ನಲ್ಲಿರಬೇಕಿದೆ. ವಾರದ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು” ಎಂದು ಹೇಳಿದ್ದಾರೆ.
“45 ಲಕ್ಷ ಮಂದಿ ಎರಡನೇ ಡೋಸ್ ಪಡೆಕೊಂಡಿಲ್ಲ. ದಯಮಾಡಿ ಎರಡನೇ ಡೋಸ್ ಹಾಕಿಸಿಕೊಳ್ಳಿ. ಸುಮ್ಮನೆ ಆತಂಕ ಸೃಷ್ಟಿ ಮಾಡುವುದು ಬೇಡ. ಅವಧಿ ಮುಗಿದರೂ ಸಹ ಕೆಲವರು ಲಸಿಕೆ ಪಡೆದಿಲ್ಲ. ಉದಾಸೀನ ತೋರದೇ ಲಸಿಕೆ ಪಡೆದುಕೊಳ್ಳಲಿ” ಎಂದು ಮನವಿ ಮಾಡಿದ್ದಾರೆ.
ರೂಪಾಂತರಿ ಕೋವಿಡ್ : ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮಹತ್ವದ ಸಭೆ – Vishwanews24
