Featured

ರೇಣುಕಾಸ್ವಾಮಿ ಹತ್ಯೆ ಕೇಸ್ : ದರ್ಶನ್ ಗೆ ತಾತ್ಕಾಲಿಕ ರಿಲೀಫ್ ; ಮಧ್ಯಂತರ ಜಾಮೀನು ಅವಧಿ ವಿಸ್ತರಣೆ – vishwanews24

ರೇಣುಕಾಸ್ವಾಮಿ ಹತ್ಯೆ ಕೇಸ್ : ದರ್ಶನ್ ಗೆ ತಾತ್ಕಾಲಿಕ ರಿಲೀಫ್ ; ಮಧ್ಯಂತರ ಜಾಮೀನು ಅವಧಿ ವಿಸ್ತರಣೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಎ2 ಆಗಿರುವ ನಟ ದರ್ಶನ್​ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅವರ ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸದ್ಯ ಅವರು ಬೆನ್ನು ನೋವಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಾಂಕದವರೆಗೂ ಮಧ್ಯಂತರ ಜಾಮೀನು ವಿಸ್ತರಣೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ. ಇಂದು (ಡಿಸೆಂಬರ್​ 9) ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಎಸ್​ಪಿಪಿ ಪ್ರಸನ್ನ ಕುಮಾರ್​ ವಾದ ಮಾಡಿದ್ದಾರೆ.

 

ದರ್ಶನ್ ಅವರ ಪರವಾಗಿ ವಕೀಲ ಸಿ.ವಿ. ನಾಗೇಶ್ ಅವರು ವಾದ ಮಂಡಿಸಿದರು. ಮಧ್ಯಂತರ ಜಾಮೀನು ಅವಧಿ ವಿಸ್ತರಿಸಲು ಮನವಿ ಮಾಡಿದರು. ಈವರೆಗೂ ದರ್ಶನ್ ಯಾಕೆ ಸರ್ಜರಿ ಮಾಡಿಸಿಲ್ಲ ಎಂಬ ಪ್ರಶ್ನೆಗೆ ಈ ಮೊದಲು ನಡೆದ ವಿಚಾರಣೆಯಲ್ಲಿ ಸಿ.ವಿ. ನಾಗೇಶ್ ಅವರು ಕಾರಣ ನೀಡಿದ್ದರು. ನಟನಿಗೆ ರಕ್ತದೊತ್ತಡ ವ್ಯತ್ಯಾಸ ಆಗುತ್ತಿರುವುದರಿಂದ ಶಸ್ತ್ರ ಚಿಕಿತ್ಸೆ ಇನ್ನೂ ನಡೆಸಿಲ್ಲ ಎಂದು ಸಿ.ವಿ. ನಾಗೇಶ್ ಹೇಳಿದ್ದರು.

Vishwa News 24

Recent Posts

ರೈಲು ಟಿಕೆಟ್‌ಗೆ ಹೊಸ ನಿಯಮ: ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಹೊಸ ಮಾರ್ಗಸೂಚಿ ಪ್ರಕಟ – vishwanews24

ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್​ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…

18 minutes ago

ಸುರತ್ಕಲ್‌ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ – vishwanews24

ಸುರತ್ಕಲ್‌ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…

1 hour ago

ಪತಿಗೆ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪತ್ನಿ – vishwanews24

ಪತಿಗೆ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪತ್ನಿ ಹಾವೇರಿ: ಪತಿಗೆ ಬೇರೆ…

1 hour ago

ಬಡ್ಡಿ ದಂಧೆಕೋರರ ಕಿರುಕುಳ : ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – vishwanews24

ಬಡ್ಡಿ ದಂಧೆಕೋರರ ಕಿರುಕುಳ : ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಗದಗ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ…

1 hour ago

ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ತುರ್ತು ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ – vishwanews24

ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರಕ್ಕೆ ಆಕ್ಷೇಪ: ತುರ್ತು ಪರಿಶೀಲನೆಗಾಗಿ ಕೇಂದ್ರ ಗೃಹ ಸಚಿವರಿಗೆ ಶೋಭಾ ಕರಂದ್ಲಾಜೆ ಪತ್ರ ಬೆಂಗಳೂರು: ಕರ್ನಾಟಕ…

2 hours ago

ಬೆಂಗಳೂರು: ಯಾವುದೇ ಕಾರಣಕ್ಕೂ ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್‌ ಸೂಚನೆ – vishwanews24

ಬೆಂಗಳೂರು: ಫುಟ್‌ಪಾತ್ ತೆರವು ಕಾರ್ಯಾಚರಣೆ ನಿಲ್ಲಲ್ಲ : ಸಚಿವ ಕೃಷ್ಣ ಬೈರೇಗೌಡ ಖಡಕ್‌ ಸೂಚನೆ ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಬೆಂಗಳೂರು…

2 hours ago