ರೇಷನ್ ಕಾರ್ಡ್ ಇ-ಕೆವೈಸಿ ಆಗದಿದ್ದರೆ ರೇಷನ್‌ ಕಾರ್ಡ್‌ ರದ್ದು : ಸೆ. 30  ಕೊನೆ ದಿನ – vishwanews24

Featured, ರಾಜ್ಯ ನ್ಯೂಸ್

ರೇಷನ್ ಕಾರ್ಡ್ ಇ-ಕೆವೈಸಿ ಆಗದಿದ್ದರೆ ರೇಷನ್‌ ಕಾರ್ಡ್‌ ರದ್ದು : ಸೆ. 30  ಕೊನೆ ದಿನ

ಬೆಂಗಳೂರು : ರೇಷನ್ ಕಾರ್ಡ್ ಇ ಕೆವೈಸಿ ಮುಕ್ತಾಯಕ್ಕೆ ಕೇವಲ 15 ದಿನ ಅಷ್ಟೇ ಬಾಕಿ ಇದೆ. ಇ-ಕೆವೈಸಿ ಆಗದಿದ್ದರೆ ರೇಷನ್ ಕಾರ್ಡ್ ರದ್ದಾಗಲಿದೆ.

ಇದುವರೆಗೂ ಕೇವಲ 36.44% ಅಷ್ಟೇ ಇ ಕೆವೈಸಿ ಆಗಿದೆ. ಒಂದು ಕಡೆ ಸರ್ವರ್ ಕಾಟ ಮತ್ತೊಂದು ಕಡೆ ಡೆಡ್ ಲೈನ್ ಆತಂಕ ನಡುವೆ ಇದುವರೆಗೂ 36.44% ಅಷ್ಟೇ ಇ ಕೈವೈಸಿ ಆಗಿದೆ.

ಒಟ್ಟು 2.67 ಕೋಟಿ ರೇಷನ್ ಕಾರ್ಡ್‌ಗಳ ಇ-ಕೆವೈಸಿ ಆಗಬೇಕಿದ್ದು, ಇದುವರೆಗೂ 97.54 ಲಕ್ಷ ಅಷ್ಟೇ ಇಕೆವೈಸಿ ಆಗಿದೆ. ಇನ್ನೂ 1.70 ಕೋಟಿ ರೇಷನ್ ಕಾರ್ಡ್‌ಗಳ ಇ ಕೆವೈಸಿ ಆಗಬೇಕಿದೆ. ಒಂದು ವೇಳೆ ಇ ಕೆವೈಸಿ ಮಾಡಿಸದಿದ್ದರೆ ಕಾರ್ಡ್ ರದ್ದಾಗಲಿದೆ. ಸೆಪ್ಟೆಂಬರ್ 30 ಕೊನೆ ದಿನ ಇದ್ದು ಸಮಯ ವಿಸ್ತರಣೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.

ಬೆಂಗಳೂರು ಪೂರ್ವ, ರಾಯಚೂರು, ವಿಜಯಪುರ ಹಾಗೂ ಬೆಳಗಾವಿಯಲ್ಲಿ 50% ಇ ಕೈವೈಸಿ ದಾಟಿದೆ. ಉಡುಪಿ, ಬಳ್ಳಾರಿ, ಬೀದರ್, ಶಿವನೊಗ್ಗ, ಕೊಪ್ಪಳ ಹಾಗೂ ಚಾಮರಾಜನಗರದಲ್ಲಿ ಶೇಕಾಡ 20 ರಿಂದ 25 ರಷ್ಟು ಇ ಕೈವೈಸಿ ಆಗಿದೆ.

Leave a Reply