ಮೈಸೂರು, (Vishwanews24) : ”ರೈತರನ್ನೇ ದಾರಿ ತಪ್ಪಿಸಿದವರು, ಕೆಎಸ್‌ಆರ್‌ಟಿಸಿ ನೌಕರರನ್ನು ಬಿಡುತ್ತಾರಾ” ಎಂದು ಸಂಸದ ಪ್ರತಾಪ್ ಸಿಂಹ ಅವರು ಹೇಳಿದ್ದಾರೆ.
ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಈ ಹಿನ್ನೆಲೆ ಸಂಸದ ಪ್ರಯಾಪ್‌ಸಿಂಹ ಅವರು ಮೈಸೂರು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರ್ಯಾಯ ಬಸ್ ಸೇವೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ”ರೈತರನ್ನೇ ದಾರಿ ತಪ್ಪಿಸಿದವರನ್ನು ನಮ್ಮ ನಾಯಕ ಎಂದು ಹೇಳಿದರೆ, ಕೆಎಸ್‌ಆರ್‌ಟಿಸಿ ನೌಕರರು ದಾರಿ ತಪ್ಪದೇ ಇರುತ್ತಾರಾ? ಕೆಎಸ್‌ಆರ್‌ಟಿಸಿ ನೌಕರರು ಆತನನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿರುವುದೇ ತಪ್ಪು” ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಅವರು ಇರೋದೇ ಕಪ್ಪು , ಹಾಗಾಗಿ ಅವರನ್ನು ಕರಿಯ ಎಂದು ಕರೆದೆ.. : ಜಮೀರ್ ಅಹ್ಮದ್ -Vishwanews24
”ಪ್ರೊ| ನಂಜುಂಡಸ್ವಾಮಿ, ಕೆ. ಎಸ್. ಪುಟ್ಟಣ್ಣಯ್ಯ ಅವರು ಇದ್ದಾಗ ರೈತ ಮುಖಂಡರು ಹಾಗೂ ಅವರ ಹೋರಾಟದ ಬಗ್ಗೆ ನನಗೆ ಗೌರವವಿತ್ತು. ಆದರೆ ಅವರಿಬ್ಬರು ನಿಧನ ಹೊಂದಿದ್ದ ಬಳಿಕ ಈಗ ಅವರಂತವರು ಯಾರೂ ರೈತ ಮುಖಂಡರು ಇಲ್ಲ. ಈಗ ಇರುವವರು ಬರೀ ಹೋರಾಟಗಾರರು” ಎಂದು ಹೇಳಿದರು.
”ಕೆಎಸ್‌ಆರ್‌ಟಿಸಿ ನೌಕರರು ಹೀಗೆ ಸಂಕಷ್ಟದ ಸಂದರ್ಭದಲ್ಲಿ ಹೋರಾಟ ನಡೆಸುವಾಗ ನಾವು ಈ ವಿಭಾಗವನ್ನೂ ಕೂಡಾ ಖಾಸಗೀಕರಣ ಮಾಡುವ ಚಿಂತನೆ ನಡೆಸಬೇಕಾಗುತ್ತದೆ. ಈಗಾಗಲೇ ನಾವು ಎಲ್ಲಾ ವಿಭಾಗಗಳಲ್ಲಿ ಖಾಸಗೀಕರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ” ಎಂದು ಕೂಡಾ ಅವರು ತಿಳಿಸಿದರು.
”ನಿಮ್ಮ ಮೇಲೆ ಇಟ್ಟಿರುವ ಪ್ರೀತಿ ಮುಷ್ಕರ ಮಾಡುವ ಮೂಲಕ ಕಳೆದುಕೊಳ್ಳಬೇಡಿ. ಜನರೇ ಎಲ್ಲಾ ವಿಭಾಗ ಖಾಸಗೀಕರಣ ಮಾಡಬೇಕು ಎಂದು ಒತ್ತಾಯಿಸುವಂತೆ ಮಾಡಬೇಡಿ. ಸರ್ಕಾರ ಎಸ್ಮಾ ಜಾರಿ ಮಾಡಬೇಕಾದ ಸ್ಥಿತಿಯನ್ನು ಕೂಡಾ ತಂದೊಡ್ಡಬೇಡಿ” ಎಂದು ಮನವಿ ಮಾಡಿದರು.
ಬೆಳ್ತಂಗಡಿ : ಯುವತಿಗೆ ಚೂರಿ ಇರಿತ ; ಆರೋಪಿಯ ಬಂಧನ -Vishwanews24
ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…
ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…
ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…
ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ…
ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…
ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…