ಬೆಳ್ತಂಗಡಿ : ಯುವತಿಗೆ ಚೂರಿ ಇರಿತ ; ಆರೋಪಿಯ ಬಂಧನ -Vishwanews24

Featured, ದಕ್ಷಿಣ ಕನ್ನಡ

ಬೆಳ್ತಂಗಡಿ : ಯುವತಿಗೆ ಚೂರಿ ಇರಿತ ; ಆರೋಪಿಯ ಬಂಧನ -Vishwanews24

ಬೆಳ್ತಂಗಡಿ : ಯುವತಿಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆ ಬೆಳ್ತಂಗಡಿಯ ಲಾಯಿಲ ಗ್ರಾಮದ ಪುತ್ರಬೈಲು ಗುರಿಂಗಾನದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪೂಂಜಾಲಕಟ್ಟೆ ನಿವಾಸಿ ಶಮೀರ್ ಎಂದು ತಿಳಿದುಬಂದಿದೆ.

ಶಮೀರ್‌, ಯುವತಿಯನ್ನು ಸುಮಾರು 5 ವರ್ಷಗಳಿಂದ ಪ್ರೀತಿ ಸುತ್ತಿದ್ದು, ಮದುವೆಯಾಗಲು ಮನೆ ಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಅದನ್ನು ಆಕೆ ತಿರಸ್ಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಮಂಗಳವಾರ ರಾತ್ರಿ 10.20ಕ್ಕೆ ಯುವತಿ ಮನೆಗೆ ನುಗ್ಗಿ ಆಕೆಗೆ ಚೂರಿಯಿಂದ ಇರಿದಿದ್ದಾನೆ. ಎಡ ಕೈ, ಬಲ ಕೈಗೆ ಮತ್ತು ಕುತ್ತಿಗೆಗೆ ಗಾಯವಾಗಿದೆ. ತತ್‌ಕ್ಷಣ ಮನೆಮಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಕಲಂ: 448, 324, 354, 504, 506, ಐ.ಪಿ.ಸಿ.ಯಡಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ ಜೆಡಿಎಸ್ ಜಿಲ್ಲಾಧ್ಯಕ್ಷ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರ್ಪಡೆ -Vishwanews24