ಉಡುಪಿ: ಪಂಚ ಮಹಾ ಶಕ್ತಿಗಳ ಪುಣ್ಯ ಕ್ಷೇತ್ರವಾದ ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಧರ್ಮಧರ್ಶಿ ಭಾಸ್ಕರ ಪೂಜಾರಿ ಗುಂಡಿಬೈಲ್ ಇವರ ಮಾರ್ಗದರ್ಶನದಲ್ಲಿ ಮಹಾಚಂಡಿಕಯಾಗ ನಡೆಯಿತು.
ಕೋಡಿಮಠದ ಶ್ರೀಗಳು ಕೊರೋನಾ ಮಹಾಮಾರಿಯ ನಿವಾರಣೆಗಾಗಿ ಶ್ರೀ ಕ್ಷೇತ್ರದಲ್ಲಿ ನೆಲೆಯಾದ ತ್ರಿಪುರಾಂಭಿಕೆಗೆ ಚಂಡಿಕಯಾಗ ಮಾಡಿಸಬೇಕೆಂಬ ನುಡಿಯಂತೆ ಆದಿತ್ಯವಾರ ಕೇವಲ ಕ್ಷೇತ್ರದ ಧರ್ಮದರ್ಶಿ ಮತ್ತು ಕಮಿಟಿ ಸದಸ್ಯರ ಸಮ್ಮುಖದಲ್ಲಿ ಲಾಕ್-ಡೌನ್ ಉಲ್ಲಂಘಿಸದೆ ಸೇವೆ ನಡೆಸಲಾಯಿತು.
ಈ ಸಂದರ್ಭ ಧರ್ಮದರ್ಶಿಗಳಾದ ಭಾಸ್ಕರ ಗುಂಡಿಬೈಲ್ ಮಾತಾಡಿ ” ಕಳೆದ ದಿನಗಳ ಹಿಂದೆ ಕ್ಷೇತ್ರದ ಜೀರ್ಣೋದ್ಧಾರದ ವಿಚಾರವಾಗಿ ಶ್ರೀ ಕೋಡಿ ಮಠದ ಶ್ರೀಗಳನ್ನು ಸಂಪರ್ಕಿಸಿದಾಗ ಕ್ಷೇತ್ರದಲ್ಲಿ ನೆಲೆಯಾದ ತ್ರಿಪುರಾಂಭಿಕೆಗೆ ತಾರೀಖು 12 ರಂದು ಚಂಡಿಕಯಾಗ ನಡೆಸಬೇಕು ಆ ಸಮಯದಲ್ಲಿ ಕ್ಷೇತ್ರಕ್ಕೆ ಸಂಬಂಧ ಪಟ್ಟ ಜಾಗದಲ್ಲಿ ಕೊರೋನಾ ರೋಗದ ಅಟ್ಟಹಾಸ ಕಡಿಮೆಯಾಗಿರುತ್ತದೆ ಎಂದು ಅವರು ಹೇಳಿದ ನುಡಿಯ ಪ್ರಕಾರ ಒಂದು ತಿಂಗಳ ಹಿಂದೆ ದಿನ ನಿಗದಿ ಪಡಿಸಿದ್ದೇವು.ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದೇವು, ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪಾಸಿಟಿವ್ ಪ್ರಕರಣ ಇಲ್ಲ ಮತ್ತು ಇದ್ದ ಮೂವರು ಗುಣಮುಖರಾಗಿದ್ದಾರೆ ಇದೆಲ್ಲವೂ ತಾಯಿ ತ್ರಿಪುರಾಂಭಿಕೆಯ ಶಕ್ತಿ ಎಂದರು.”
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…