ವಂಚನೆ ಪ್ರಕರಣ : ಝೀನತ್ ಜಾಮೀನು ಅರ್ಜಿ ತಿರಸ್ಕೃತ – vishwanews24
ವಂಚನೆ ಪ್ರಕರಣ : ಝೀನತ್ ಜಾಮೀನು ಅರ್ಜಿ ತಿರಸ್ಕೃತ
ಉಡುಪಿ: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪಡುಬಿದ್ರಿಯ ಝೀನತ್ ಇಬ್ರಾಹಿಂ ಜಾಮೀನಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಒಂದನೇ ಎಸಿಜೆಎಂ ನ್ಯಾಯಾಲಯ ತಿರಸ್ಕರಿಸಿದೆ. ಬ್ಲಾಕ್ಮೇಲ್ ಹಾಗೂ ಸುಳ್ಳು ಹೇಳಿ ಮೂರು ಪ್ರಕರಣಗಳಲ್ಲಿ ಜನರಿಂದ ಲಕ್ಷಗಟ್ಟಲೆ ಹಣ ಹಾಗೂ ಚಿನ್ನ ಪಡೆದು ಮೋಸ ಮಾಡಿ ಜೀವ ಬೆದರಿಕೆ ಹಾಕಿದ್ದ ಝೀನತ್ ಳನ್ನು ಉಡುಪಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆರೋಪಿಗೆ ಜೈಲುವಾಸ ಮುಂದುವರಿದಿದೆ.
