Featured

ವಾಟ್ಸಪ್ ಸುದ್ದಿಗೂ ನನಗೂ ಯಾವುದೇ ಸಂಬಧವಿಲ್ಲ: ಬೀಡುಬದಿ ವಾರ್ಡು ಪಕ್ಷೇತರ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದಾ ಪೂಜಾರಿ ಸ್ಪಷ್ಟನೆ: Vishwanews24

ವಾಟ್ಸಪ್ ಸುದ್ದಿಗೂ ನನಗೂ ಯಾವುದೇ ಸಂಬಧವಿಲ್ಲ: ಬೀಡುಬದಿ ವಾರ್ಡು ಪಕ್ಷೇತರ ಅಭ್ಯರ್ಥಿ ಮುನ್ನಾಯಾನೆ ಶಿವಾನಂದಾ ಪೂಜಾರಿ ಸ್ಪಷ್ಟನೆ : Vishwanews24

ಕಾಪು: ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಬೀಡುಬದಿ ವಾರ್ಡಿನಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಮುನ್ನಾ ಯಾನೆ ಶಿವಾನಂದಾ ಪೂಜಾರಿ ಸೋಲು ಕಂಡಿದ್ದರು. ತದನಂತರದ ದಿನದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್ ಜತೆಗೆ ನಿಂತಿದ್ದ ಫೋಟೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ವೈರಲ್ ಆದ ಫೋಟೊದಲ್ಲಿ” ಬಿಲ್ಲವ ಮುಖಂಡ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಸೋಲಿಸಲು ಮುನ್ನಾ ಹಾಗೂ ಶಾಸಕರ ನಡುವೆ ಒಳ ಒಪ್ಪಂದವಾಗಿತ್ತು , ಫಲಿತಾಂಶದ ದಿನ ಇಬ್ಬರೂ ಕೂಡ ಒಂದೇ ಫೋಟೊದಲ್ಲಿ ಕಾಣಿಸಿಕೊಂಡಿದ್ದರು ಇದರಿಂದ ಶಾಸಕರ ಬಣ್ಣಬಯಲಾಗಿದೆಂದು ಕಿಡಿಗೇಡಿಗಳು ಸುದ್ದಿ ಹರಡಿಸಿದ್ದರು.


ಈ ಬಗ್ಗೆ ವಿಶ್ವನ್ಯೂಸ್24  ಗೆ ಪ್ರತಿಕ್ರೀಯೆ ನೀಡಿದ ಮುನ್ನಾ ಯಾನೆ ಶಿವಾನಂದಾ ಪೂಜಾರಿ” ನಾನು ಕೂಡ 20 ವರ್ಷಗಳಿಂದ ಬಿಜೆಪಿ ಕಾರ್ಯಕರ್ತ ಹಾಗಾಗಿ ಸಾಮಾನ್ಯವಾಗಿ ಬೀಡುಬದಿ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಬಿಜೆಪಿಯಿಂದ ಟಿಕೆಟ್ ಬಯಸಿದ್ದೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದೇನೆಯೆ ಹೊರತು ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಅವರನ್ನು ಸೋಲಿಸಲು ಖಂಡಿತವಾಗಿಯೂ ಅಲ್ಲ, ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಲು ನಾಮಪತ್ರ ಸಲ್ಲಿಸಿದ ಸಮಯದಲ್ಲೂ ಕೂಡ ನಾಮಪತ್ರ ಹಿಂಪಡೆಯುವ0ತೆ ಶಾಸಕರು
ಮನವಿ ಮಾಡಿದ್ದರು ಆದರೇ ಕಣಕ್ಕಿಳಿದ ನಂತರ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರ ಮನವಿಯನ್ನು ಪುರಸ್ಕರಿಸಲಿಲ್ಲ, ಹಾಗಾದರೇ ಶಾಸಕರಿಗೂ ನನಗೂ ಒಳೊಪ್ಪಂದ ಆಗಲು ಹೇಗೆ ಸಾದ್ಯ..? ಇದು ಯಾರೋ ಕೀಡಿಗೇಡಿಗಳ ಕೃತ್ಯವೇ ಹೊರತು ಒಳಒಪ್ಪಂದ ಅಲ್ಲ, ಗೌರವಾನ್ವಿತ ಶಾಸಕರ ಮೇಲೆ ಗೌರವವಿದೆ ಎಂದರು. ಮತ್ತು ಇಲ್ಲಿ ಯಾವುದೇ ಕಾರಣಕ್ಕೂ ಜಾತಿ ರಾಜಕಾರಣ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದು ಮುಂದುವರಿದರೆ ಸೈಬರ್ ಕ್ರೈಂ ಗೆ ದೂರು ಕೊಡಲು ನಿರ್ಧರಿಸಿದ್ದೇನೆ ಎಂದು ಕಟುವಾಗಿ ತಿಳಿಸಿದರು.

ಜಾಹಿರಾತು

 

Vishwa News 24

Recent Posts

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ -vishwanews24

ಮಳೆಯ ಅಬ್ಬರ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.8 (ನಾಳೆ ) ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಜಿಲ್ಲೆ…

1 hour ago

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

7 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

9 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

9 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

9 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

10 hours ago