ವಿಟ್ಲ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ :-ಆರೋಪಿ ಸಂಶೀರ್ ಬಂಧನ – Vishwanews24

Featured, ದಕ್ಷಿಣ ಕನ್ನಡ

ವಿಟ್ಲ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ :-ಆರೋಪಿ ಸಂಶೀರ್ ಬಂಧನ

ವಿಟ್ಲ, :ಅಪ್ರಾಪ್ತ ಬಾಲಕಿಗೆ ದೈಹಿಕ ಸಂಪರ್ಕ ಮಾಡಿ ಲೈಂಗಿಕಕ್ರಿಯೆ ನಡೆಸಿದ ಆರೋಪದ ಮೇಲೆ ಆರೋಪಿಯೋರ್ವನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದ್ದು , ಆರೋಪಿಯನ್ನು ಬಂಧಿಸಿರುವ ಘಟನೆಯೊಂದು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗುರುವಾರದಂದು ವರದಿಯಾಗಿದೆ.

ಕೊಳ್ನಾಡು ಗ್ರಾಮದ ಕುಳಾಲು ನಿವಾಸಿ ಸಂಶೀರ್ ಎಂಬಾತ ಬಂಧಿತ ಆರೋಪಿ. ಈತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಇನ್ ಸ್ಟಾ ಗ್ರಾಂ ಮೂಲಕ ಪರಿಚಯವಾದ ಬಾಲಕಿಯನ್ನು ಪ್ರೀತಿಸುವ ನೆಪ ಮಾಡಿ ಬಳಿಕ ಮನೆಗೆ ಬಂದು ಬಲಾತ್ಕಾರವಾಗಿ ದೈಹಿಕ ಸಂಪರ್ಕ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ದೂರಿನಂತೆ ಈತನನ್ನು ವಿಟ್ಲ ಪೋಲಿಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ನೇತೃತ್ವದ ಎಸ್‌ಐ. ಸಂದೀಪ್ ಶೆಟ್ಟಿ ಅವರ ತಂಡ ಬಂಧಿಸಿದೆ.

ಉಡುಪಿ : ನ. 7 ರಂದು ಮಹಾಲಕ್ಷ್ಮೀ ಬ್ಯಾಂಕ್ ವಿಸ್ತರಿತ ಆಡಳಿತ ಕಚೇರಿಯ ಉದ್ಘಾಟನೆ : ಯಶ್‌ಪಾಲ್ ಎ. ಸುವರ್ಣ – Vishwanews24

Leave a Reply