ವಿಟ್ಲ : ಅಪ್ರಾಪ್ತ ಹುಡುಗಿ ಆತ್ಮಹತ್ಯೆ ಪ್ರಕರಣ : ಇದೊಂದು ವ್ಯವಸ್ಥಿತ ಲವ್ ಜಿಹಾದ್ ; ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ – Vishwanews24

Featured, ದಕ್ಷಿಣ ಕನ್ನಡ

ವಿಟ್ಲ : ಅಪ್ರಾಪ್ತ ಹುಡುಗಿ ಆತ್ಮಹತ್ಯೆ ಪ್ರಕರಣ : ಇದೊಂದು ವ್ಯವಸ್ಥಿತ ಲವ್ ಜಿಹಾದ್ ;

ಉನ್ನತ ಮಟ್ಟದ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ವಿಟ್ಲ: ಕನ್ಯಾನ ಗ್ರಾಮದ ಕಾಣಿಯೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಆತ್ಮಿಕ ಸಾವನ್ನಪ್ಪಿದ್ದಾಳೆ. ಸಾಹುಲ್ ಹಮೀದ್ ಎಂಬ ಮುಸ್ಲಿಂ ಯುವಕ ಪ್ರೀತಿಸುವಂತೆ ಪೀಡಿಸಿ, ಅವನ ಕಾಟ ತಡೆಯಲಾರದೆ ಹುಡುಗಿ ಸಾವನ್ನಪ್ಪಿದ್ದಾಳೆ, ಮೇಲ್ನೋಟಕ್ಕೆ ಆತ್ಮಹತ್ಯೆ ದಾಖಲಾಗಿದ್ದು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದ್ದಾರೆ.

ಸಾಹುಲ್ ಹಮೀದ್ ವಾಮಾಚಾರವನ್ನು ಪ್ರಯೋಗಿಸಿ, ಬೆದರಿಸಿ, ಅವಳಿಗೆ ಬುರ್ಖಾ ಹಾಕಿಸಿ ಅವಳನ್ನು ಅವನ ಕುಟುಂಬದವರ ಸಹಕಾರದಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಎಂದು ಆ ಹುಡುಗಿಯ ಮನೆಯವರು ಆರೋಪಿಸಿದ್ದಾರೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಕೃತ್ಯವಾಗಿದೆ. ಹುಡುಗಿಯ ಮನೆಗೆ ಹೋಗಿ ಮನೆಯವರಿಗೆ ಸಾಂತ್ವನ ಹೇಳಿದ ಅವರು ಈ ಸಾವಿಗೆ ಕಾರಣವಾದ ಸಾಹುಲ್ ಹಮೀದ್ ಮತ್ತು ಅವನ ಮನೆಯವರನ್ನು ಕೂಡಲೇ ಬಂಧಿಸಿ ಅವರಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಉಡುಪಿ : ಮಲ್ಪೆಯಲ್ಲಿ ರಾಜ್ಯದ ಪ್ರಥಮ ಫ್ಲೋಟಿಂಗ್‌ ಬ್ರಿಡ್ಜ್‌ʼ ಲೋಕಾರ್ಪಣೆ – Vishwanews24

Leave a Reply