ವಿಟ್ಲ: ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ಅನಾರೋಗ್ಯದಿಂದ ನಿಧನ – Vishwanews24
ವಿಟ್ಲ: ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ಅನಾರೋಗ್ಯದಿಂದ ನಿಧನ
ವಿಟ್ಲ: ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತ ದಕ್ಷಿಣ ಕನ್ನಡ ಬಂಟ್ವಾಳ ವಿಟ್ಲ ಸಮೀಪದ ಕನ್ಯಾನ ಮಿತ್ತನಡ್ಕ ನಿವಾಸಿ 25 ವರ್ಷದ ದೀಕ್ಷಿತ್ ನಾಯಕ್ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.
ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನು ದೀಕ್ಷಿತ್ ರವರ ತಂದೆ ಕಳೆದ ವರ್ಷ ಅಸೌಖ್ಯದಿಂದ ಮರಣ ಹೊಂದಿದ್ದರು.
ಏಕೈಕ ಪುತ್ರನಾಗಿದ್ದ ಇವರು ತಂದೆಯ ಹೋಟೆಲ್ ಮತ್ತು ಅಂಗಡಿಯನ್ನು ಮುನ್ನಡೆಸುತ್ತಿದ್ದು, ಮನೆಗೆ ಆಧಾರ ಸ್ತಂಭವಾಗಿದ್ದರು.
ಇದನ್ನೂ ಓದಿ : ದಕ, ಉಡುಪಿ ಸಹಿತ ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ – Vishwanews24
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಣವನ್ನು ಪಡೆದಿದ್ದ ದೀಕ್ಷಿತ್ ಈ ಮೊದಲು ಮಾಣಿಲ ಗ್ರಾಮದ ಪ್ರತಿಯೊಂದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು.
ಮೃತರು ತಾಯಿ, ಸಹೋದರಿ ಮತ್ತು ಅಪಾರ ಸ್ನೇಹಿತ ಬಳಗವನ್ನು ಅಗಲಿದ್ದಾರೆ.
