ವೀರ ಹನುಮಂತನ ಚಿತ್ರದ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್ ಅಧ್ಯಕ್ಷ -Vishwanews24
ವೀರ ಹನುಮಾನ್ ಲಸಿಕೆಯನ್ನು ಭಾರತದಿಂದ ಬ್ರೆಜಿಲ್ ಗೆ ಕೊಂಡೊಯ್ಯುತ್ತಿರುವ ಚಿತ್ರದ ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್ ಅಧ್ಯಕ್ಷ -Vishwanews24
ನವದೆಹಲಿ: ಭಾರತ ವಿವಿಧ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಿದ್ದು, ಈಗಾಗಲೇ ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳಗೆ ಲಸಿಕೆ ಕಳುಹಿಸಿಕೊಟ್ಟಿರುವ ಭಾರತ ಇದೀಗ ಬ್ರೆಜಿಲ್ಗೂ ಕೊವಿಶೀಲ್ಡ್ ವ್ಯಾಕ್ಸಿನ್ ರವಾನೆ ಮಾಡಿದೆ.
ಕೊವಿಶೀಲ್ಡ್ ಲಸಿಕೆ ಬ್ರೆಜಿಲ್ಗೆ ತಲುಪಿದ್ದು, ಅಲ್ಲಿನ ಅಧ್ಯಕ್ಷ ಜೈರ್ ಎ ಬೋಲ್ಸನಾರೋ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜಾಗತಿಕ ಸಮಸ್ಯೆ ನಿವಾರಣೆ ಮಾಡಲು ಉತ್ತಮ ಪಾಲುದಾರನಾಗಿರುವ ಭಾರತ ಬ್ರೆಜಿಲ್ಗೆ ಲಸಿಕೆ ರಫ್ತು ಮಾಡಲು ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ವೀರ ಹನುಮಾನ್ ಲಸಿಕೆಯನ್ನು ಭಾರತದಿಂದ ಬ್ರೆಜಿಲ್ ಗೆ ಕೊಂಡೊಯ್ಯುತ್ತಿರುವ ಚಿತ್ರವನ್ನು ಬೋಲ್ಸೊನಾರೋ ಟ್ವೀಟ್ ಮಾಡುವ ಮೂಲಕ ಧನ್ಯವಾದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
– Namaskar, Primeiro Ministro @narendramodi
– O Brasil sente-se honrado em ter um grande parceiro para superar um obstáculo global. Obrigado por nos auxiliar com as exportações de vacinas da Índia para o Brasil.
– Dhanyavaad! धनयवाद pic.twitter.com/OalUTnB5p8
— Jair M. Bolsonaro (@jairbolsonaro) January 22, 2021
ತಮ್ಮ ಟ್ವೀಟ್ ಜೊತೆಗೆ ಬ್ರೆಜಿಲ್ ಅಧ್ಯಕ್ಷರು ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಹೋಗುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.
“ನಮಸ್ಕಾರ್ ಪ್ರಧಾನಿ ನರೇಂದ್ರ ಮೋದಿಜೀ! ಜಾಗತಿಕ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ನಮಗೆ ಬಹುದೊಡ್ಡ ಪಾಲುದಾರ ದೇಶದ ಜತೆ ಸ್ನೇಹ ಹೊಂದಿರುವ ಭಾವನೆ ಬ್ರೆಜಿಲ್ ಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಕೋವಿಡ್ ಲಸಿಕೆಯನ್ನು ಭಾರತದಿಂದ ಬ್ರೆಜಿಲ್ ಗೆ ರಫ್ತು ಮಾಡಿರುವುದಕ್ಕೆ ಅಭಿನಂದನೆಗಳು. ಧನ್ಯವಾದ.” ಎಂದು ಬೋಲ್ಸೊನಾರೊ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಬ್ರೆಜಿಲ್ ನ ವಿಶ್ವಾಸಾರ್ಹ ಪಾಲುದಾರನಾಗಿರುವುದಕ್ಕೆ ಭಾರತಕ್ಕೆ ಕೂಡಾ ಹೆಮ್ಮೆಯ ವಿಷಯವಾಗಿ ಎಂದು ತಿಳಿಸಿದ್ದಾರೆ. ಅಲ್ಲದೇ ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ಸಹಕಾರವನ್ನು ಬಲಗೊಳಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಜಾಮೀನು ಮಂಜೂರು ಮಾಡಿದ ಎರಡು ದಿನಗಳ ಬಳಿಕ ಇಂದು ರಾಗಿಣಿ ಜೈಲಿನಿಂದ ಬಿಡುಗಡೆ -Vishwanews24
