ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್: ಪೃಥ್ವಿ ಶಾ ಚೊಚ್ಚಲ ಶತಕ, ಬೃಹತ್ ಮೊತ್ತದತ್ತ ಭಾರತ
ರಾಜ್ ಕೋಟ್: ಗುರುವಾರ ಪ್ರಾರಂಬವಾಗಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾರತದ ಯುವ ಆಟಗಾರ ಪೃಥ್ವಿ ಶಾ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ.
99 ಎಸೆತಗಳಲ್ಲಿ 100 ರನ್ ಗಳಿಸಿದ ಶಾ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಯುವ ಕ್ರೀಡಾಪಟುವಾಗಿದ್ದಾರೆ.
ಡೆಬ್ಯು ಬ್ಯಾಟ್ಸ್‌ಮನ್ ಪೃಥ್ವಿ ಶಾ 17 ವರ್ಷ್ದವರಾಗಿದ್ದು ವಿಜಯ್ ಮೆಹ್ರಾ ಬಳಿಕ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಆರಂಭಿಕ ಆಟಗಾರನೊಬ್ಬ ಶತಕ ಸಿಡಿಸಿದ ಎರಡನೇ ಕಿರಿಯ ಕ್ರಿಕೆಟಿಗರೆನಿಸಿದ್ದಾರೆ ಎಂದು ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳುತ್ತಾರೆ.
ಇನ್ನು ಟೆಸ್ಟ್ ನ ಮೊದಲ ದಿನದಾಟದಲ್ಲಿ ಬೃಹತ್ ಮೊತ್ತದತ್ತ ಮುನ್ನುಗ್ಗುತ್ತಿರುವ ಭಾರತ ತಂಡ ಪರ ಚೇತೇಶ್ವರ ಪೂಜಾರ ಅರ್ಧಶತಕ (86) ನೆರವಿನಿಂದ 45.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿದೆ. ಸಧ್ಯ ಪ್ರಥ್ವಿ ಶಾ ಹಾಗೂ ನಾಯಕ ವಿರಾಟ್ ಕೊಹ್ಲಿ ಕಣದಲ್ಲಿದ್ದಾರೆ.

