ಶಂಕರಪುರ ರೋಟರಿ ಸಂಸ್ಥೆ 20 ವರ್ಷಗಳಿಂದ ದೇವ ದುರ್ಲಭ ಸೇವೆ : ದಾನಿಗಳ ಸಹಕಾರದ ನಿರೀಕ್ಷೆ vishwanews24
ಶಂಕರಪುರ ರೋಟರಿ ಸಂಸ್ಥೆ 20 ವರ್ಷಗಳಿಂದ ದೇವ ದುರ್ಲಭ ಸೇವೆ : ದಾನಿಗಳ ಸಹಕಾರದ ನಿರೀಕ್ಷೆ vishwanews24
ಉಡುಪಿ: ಸುಮಾರು 38 ವರ್ಷಗಳಿಂದ ರೋಟರಿ ಶಂಕರಪುರ ತಮ್ಮ ಪರಿಸರಕ್ಕೆ ಉತ್ತಮ ಸೇವೆಯನ್ನು ಕೊಡುತ್ತಾ ಬಂದಿರುತ್ತದೆ ಅವುಗಳಲ್ಲಿ ಉಚಿತ ಮಾನಸಿಕ ಆರೋಗ್ಯ ಚಿಕಿತ್ಸೆ ಹಾಗೂ ಉಚಿತ ಔಷಧ ವಿತರಣೆ ಮಾಡುವ ಮೂಲಕ ಜನಸಾಮಾನ್ಯರಿಗೆ ಉತ್ತಮ ಆರೋಗ್ಯವನ್ನು ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.
1999 ರಲ್ಲಿ ರೋಟರಿ ಶಂಕರಪುರ ರೊಟರಿ ಟ್ರಸ್ಟ್ ಸ್ಥಾಪಿಸಿಕೊಂಡು ರೋಟರಿ ಸದಸ್ಯರು ಹಾಗೂ ಅವರ ಕುಟುಂಬದಿಂದ ಮತ್ತು ಊರ ಪರವೂರ ದಾನಿಗಳಿಂದ ನಿಧಿ ಸಂಗ್ರಹಿಸಿಕೊಂಡು 2003ರಿಂದ ಪ್ರತಿ ತಿಂಗಳ ಮೊದಲ ಆದಿತ್ಯವಾರ ನಿರಂತರವಾಗಿ ಉಚಿತ ಮಾನಸಿಕ ಚಿಕಿತ್ಸಾ ಶಿಬರವನ್ನು ನಡೆಸುತ್ತಾ ಬಂದಿದ್ದು ಇದೀಗ 240ನೇ ಶಿಬಿರವು ಮುಗಿದಿರುತ್ತದೆ.
ಉಡುಪಿಯ ಎಬಿ ಬಾಲಿಗ ಆಸ್ಪತ್ರೆಯ ಖ್ಯಾತ ಮನೋವೈದ್ಯರಾದ ಡಾಕ್ಟರ್ ಪಿವಿ ಭಂಡಾರಿ, ಮಂಗಳೂರು ದೇಗಳ ಕಟ್ಟೆ ಕೆ ಎಸ್ ಹೆಗಡೆ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞರಾದ ಡಾಕ್ಟರ್ ಶ್ರೀನಿವಾಸ್ ಭಟ್ ಡಾಕ್ಟರ್ ರೋಹನ್ ಮೆಂಡೋಸ್ ಡಾಕ್ಟರ್ ನಾಗರಾಜ್ ಅವರ ತಂಡವು ಉಚಿತವಾಗಿ ಸಹಕಾರ ಮಾಡುತ್ತಾ ಬರುತ್ತಿದೆ.
15 – 20 ರೋಗಿಗಳಿಂದ ಪ್ರಾರಂಭವಾದ ಈ ಶಿಬಿರವು ಪ್ರಸ್ತುತ 160 ರಿಂದ 175 ರೋಗಿಗಳು ಭಾಗವಹಿಸುತ್ತಿದ್ದಾರೆ. ಈಗಾಗಲೇ ಸುಮಾರು 500ಕ್ಕೂ ಅಧಿಕ ಮಾನಸಿಕ ರೋಗವನ್ನ ಕಡಿಮೆ ಮಾಡುವಲ್ಲಿ ಮತ್ತು ಅದನ್ನು ಬುಡ ಸಮೇತವಾಗಿ ಕಿತ್ತು ಹಾಕುವಲ್ಲಿ ಈ ಶಿಬಿರವು ಫಲಪ್ರದವಾಗಿರುತ್ತದೆ ಎಂದು ಶಂಕರಪುರ ರೋಟರಿ ಸಂಸ್ಥೆಯ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಇದೇ ಸಂದರ್ಭದಲ್ಲಿ ಡಾಕ್ಟರ್ ಪಿವಿ ಭಂಡಾರಿ ಮಾತನಾಡಿ ದೇಶದಲ್ಲಿ ಮಾನಸಿಕ ರೋಗಿಗಳ ತಜ್ಞರ ಕೊರತೆ ಇದ್ದು ಶೇಕಡ 50ರಷ್ಟು ಕೊರತೆ ಭಾರತ ದೇಶದಲ್ಲಿ ಎದ್ದು ಕಾಣುತ್ತಿದೆ ಸರಿಯಾದ ಸಮಯಕ್ಕೆ ಸರಿಯಾದ ಕಾಲದಲ್ಲಿ ಸಣ್ಣಮಟ್ಟಿನಲ್ಲಿ ಇರುವಾಗಲೇ ಮಾನಸಿಕ ಚಿಕಿತ್ಸೆಗೆ ಸೂಕ್ತ ಸಲಹೆ ಹಾರೈಕೆ ಮತ್ತು ಮೆಡಿಸಿನ್ ನೀಡುವ ಮುಖೇನವಾಗಿ ಒಂದು ವ್ಯಕ್ತಿಯನ್ನು ಈ ಸಮಾಜದಲ್ಲಿ ಸದೃಢವನ್ನಾಗಿ ಮಾಡಲು ಇಂತಹ ಶಿಬಿರಗಳು ಸಹಕಾರಿಯಾಗುತ್ತಿದೆ ಸರಕಾರವು ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ಆಗ್ರಹಿಸಿದರು.
ಸರಕಾರವು ಎಲ್ಲಾ ಸರಕಾರಿ ಶಾಲೆಗಳಲ್ಲಿ ಕೂಡ ಕೌನ್ಸಿಲಿಂಗ್ ಸೆಂಟರ್ ಅನ್ನು ಆರಂಭಿಸುವ ಮುಖೇನವಾಗಿ ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸಿನ ಹಾದಿಯನ್ನು ತುಳಿಯಲು ಪ್ರಯತ್ನಿಸಬೇಕು.
ಈಗಾಗಲೇ ಕೇವಲ ಸಿಬಿಎಸ್ಇ ಶಾಲೆಗಳಲ್ಲಿ ಮಾತ್ರ ಇಂತಹ ವ್ಯವಸ್ಥೆಗಳು ಹೊಂದಿದ್ದು ಇದು ನಗರ ಭಾಗವನ್ನು ಬಿಟ್ಟು ಗ್ರಾಮೀಣ ಭಾಗದಲ್ಲಿಯೂ ಕೂಡ ಆರಂಭವಾಗುವಂತೆ ಸರಕಾರ ಮನಸ್ಸು ಮಾಡಬೇಕು ಎಂದು ಅವರು ಹೇಳಿದರು.
ಮಾನಸಿಕ ರೋಗ ಎಂದರೆ ಅದಕ್ಕೆ ಹಿಂಜರಿಯುವ ಪ್ರಶ್ನೆ ಇಲ್ಲ ಅದು ಒಂದು ರೀತಿಯ ಕಾಯಿಲೆ ಅಲ್ಲ ಅದನ್ನ ಶೀಘ್ರವಾಗಿ ಗುಣಪಡಿಸಲು ಚಿಕಿತ್ಸೆಯ ಅಗತ್ಯ ಅನಿವಾರ್ಯವೂ ಇದೆ ಹಾಗಾಗಿ ಎಲ್ಲವನ್ನು ಕೂಡ ಮೆಡಿಸಿನ್ ವಿಭಾಗದಲ್ಲಿಯೇ ಸರಿ ಮಾಡಬೇಕು ಎಂಬುದು ಇಲ್ಲ ಕೆಲವೊಂದು ಕೌನ್ಸಿಲಿಂಗ್ ಮಾಡುವ ಮುಖೇನವಾಗಿ ಸರಿಪಡಿಸಲಾಗುವುದು ಒಂದು ವೇಳೆ ಅದು ಮಿತಿಮೀರಿ ಇದ್ದರೆ ಮಾತ್ರ ಮೆಡಿಸಿನ್ ಅಥವಾ ಶಾಕ್ ಟ್ರೀಟ್ಮೆಂಟ್ ಮೂಲಕ ಸರಿಪಡಿಸುವ ಅನಿವಾರ್ಯ ಎದುರಾಗಬಹುದು ಎಂದು ಅವರು ಹೇಳಿದರು.
15 ರಿಂದ 25 ವರ್ಷದ ಪ್ರಾಯದ ಹುಡುಗ ಅಥವಾ ಹುಡುಗಿಯರಲ್ಲಿ ಇಂತಹ ಸಮಸ್ಯೆಗಳು ಕಂಡುಬರುವುದು ಸರ್ವೇಸಾಮಾನ್ಯವಾಗಿದ್ದು ಇದಕ್ಕೆ ಆಪ್ತ ಸಲಹೆಗಳನ್ನು ಪಡೆಯುವುದರಿಂದ ಅವರನ್ನು ದೂರ ಇಡಲು ಅಥವಾ ಸಂರಕ್ಷಿಸಲು ಸಾಧ್ಯವಿದೆ ಎಂದರು.
ಕೆಲವೊಂದು ರೋಗಿಗಳಿಗೆ ಖಾಯಂ ಆಗಿ ಮೆಡಿಸಿನ್ ನೀಡುವ ಅನಿವಾರ್ಯತೆ ಎದುರಾದರೂ ಕೆಲವೊಂದು ಸಲ ಮೊದಲ ಟ್ರೀಟ್ಮೆಂಟ್ನಲ್ಲಿಯೇ ಸರಿಯಾದ ಉದಾಹರಣೆಗಳು ಇದೆ ಹಾಗಾಗಿ ಮೂಡನಂಬಿಕೆಯಿಂದ ಜನರು ದೂರ ನಿಂತು ಇಂತಹ ರೋಗದ ಲಕ್ಷಣಗಳು ಅಥವಾ ಇಂತಹ ಗುಣಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಮನೋವೈದ್ಯರನ್ನ ಸಂಪರ್ಕಿಸುವ ಮುಖೇನವಾಗಿ ಸರಿಪಡಿಸಿಕೊಂಡು ಹೋಗಬಹುದು ಎಂದರು.
ರೋಟರಿ ಶಂಕರಪುರವು ಇಂತಹ ಒಂದು ಸೇವೆಯನ್ನು ನೀಡುತ್ತಿರುವುದು ಅತ್ಯಂತ ಸಂತಸ ಮತ್ತು ನಾವು ವೈದ್ಯರಾಗಿ ಸೇವೆ ಮಾಡುವುದಕ್ಕೂ ಒಂದು ಹೆಮ್ಮೆ ಇದೆ ಕಳೆದ 38 ವರ್ಷಗಳಿಂದ ಈ ರೀತಿಯ ಸೇವೆಯನ್ನು ರೋಟರಿ ಶಂಕರಪುರ ನಡೆಸುತ್ತಾ ಬರುತ್ತಿದೆ ಗ್ರಾಮೀಣ ಭಾಗದಲ್ಲಿ ಇಂತಹ ಸೇವೆಗಳು ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.
