ಶಿರ್ವ: ಅಕ್ರಮ ದನದ ಮಾಂಸ ಮಾರಾಟಕ್ಕೆ ಯತ್ನ ಒರ್ವನ ಬಂಧನ -Vishwanews24
ಶಿರ್ವ: ಅಕ್ರಮ ದನದ ಮಾಂಸ ಮಾರಾಟಕ್ಕೆ ಯತ್ನ ಒರ್ವನ ಬಂಧನ -Vishwanews24
ಶಿರ್ವ: ದನಗಳನ್ನು ವಧೆ ಮಾಡಿ ಅಕ್ರಮವಾಗಿ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಶಿರ್ವ ಭೂತೊಟ್ಟು ತೋಪನಂಗಡಿ ನಿವಾಸಿ ಮೊಹಮ್ಮದ್ ಖಾಲಿದ್ (36) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಿಗ್ಗೆ ಖಚಿತ ಮಾಹಿತಿಗಳ ಪ್ರಕಾರ ಶಿರ್ವ ಪಿ ಎಸ್ ಐ ಶ್ರೀ ಶೈಲ್ ಡಿ ಎಂ ಅವರು ಶಿರ್ವಾ ಗ್ರಾಮದ ಬೂತೊಟ್ಟು ತೋಪನಂಗಡಿ ಕೈರುಲ್ಲಾರವರ ಮನೆಯ ಬಳಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಮೊಹ್ಮದ್ ಖಾಲಿದನನ್ನು ಬಂಧಿಸಿ ಆತನಿಂದ ಅಂದಾಜು ಸುಮಾರು 75-80 ಕೆಜಿ ತೂಕದ ದನದ ಮಾಂಸ ಮತ್ತು ಕಪ್ಪು ಬಣ್ಣದ ಅರ್ಧ ಕುತ್ತಿಗೆ ಕಡಿದ ಸತ್ತ ದನದ ಗಂಡು ಕರು-1 ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ಚಿಂತಕ ಜಿ. ರಾಜಶೇಖರ್ ಹಾಗೂ ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಇಸ್ಮಾಈಲ್ ತೋನ್ಸೆ ಆಯ್ಕೆ..
