ಶಿರ್ವ: ಕುತ್ಯಾರು- ಪಾದೂರು-ಕಳತ್ತೂರು ಗ್ರಾಮಾಧಿಪತಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ಥಂಭ ನಿರ್ಮಿಸಲು ಬಳಸುವ ನೂತನ ಸಾಗುವಾನಿ ಧ್ವಜಮರ (ಕೊಡಿಮರ) ಸಮರ್ಪಣೆ ಕಾರ್ಯಕ್ರಮವು ಆ. 30 ರಂದು ನಡೆಯಿತು.
ಕಾರ್ಕಳ ತಾಲೂಕಿನ ಮಿಯ್ಯಾರಿನಿಂದ ತಂದ ಸುಮಾರು 18 ಅಡಿ ಉದ್ದದ ಸಾಗುವಾನಿ ಮರವನ್ನುಕಳತ್ತೂರು ಶಾಂತಿಗುಡ್ಡೆ ಸರ್ಕಲ್ ನಿಂದ ಕಳತ್ತೂರು ದೇವಸ್ಥಾನದವರೆಗೆ ವಿವಿಧ ಚೆಂಡೆ,ವಾದ್ಯಘೋಷ ಮತ್ತು ವಿವಿಧ ಭಜನಾ ತಂಡಗಳ ಕುಣಿತ ಭಜನೆಯೊಂದಿಗೆ ಮೆರವಣಿಗೆಯಲ್ಲಿ ಶ್ರೀ ದೇಗುಲಕ್ಕೆ ತಂದು ಭಕ್ತರ ಸಮಕ್ಷಮದಲ್ಲಿ ಸಮರ್ಪಿಸಲಾಯಿತು.
ವೈಭವದ ಮೆರವಣಿಗೆಗೆ ದೇವಸ್ಥಾನದ ಹಾಗೂ ಎಲ್ಲೂರು ಸೀಮೆಯ ಪ್ರಧಾನ ತಂತ್ರಿಗಳಾದ ವೇ|ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ಪ್ರಾರ್ಥನೆ ಸಲ್ಲಿಸಿ
ಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು.ಮಂಗಳೂರು ಶ್ರೀ ಗಣೇಶ್ ಶಿಪ್ಪಿಂಗ್ ಕಂಪೆನಿಯ ದೊಡ್ಡ ಟ್ರಕ್ ನಲ್ಲಿಟ್ಟು ಧ್ವಜಮರವನ್ನು
ಪುಷ್ಪಾಲಂಕಾರಗೊಳಿಸಲಾಗಿತ್ತು.
ನೂತನ ಧ್ವಜಮರದೊಂದಿಗೆ ಅದಕ್ಕೆ ತಾಮ್ರದ ಕವಚ, ಶಿಲಾಮಯ ಧ್ವಜಸ್ಥಂಭ ಕಟ್ಟೆ ರಚಿಸಿ ಧ್ವಜಸ್ಥಂಭ ಪ್ರತಿಷ್ಠೆಮತ್ತು ಬ್ರಹ್ಮಕಲಶೋತ್ಸವ ನಡೆಸಲು ಸಂಕಲ್ಪಿಸಲಾಗಿದೆ.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ದೇಗುಲದ ಆರ್ಚಕ ವೇ|ಮೂ|ಕೇಶವ ತಂತ್ರಿ ಕಳತ್ತೂರು, ದೇಗುಲದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಂಗನಾಥ ಭಟ್ ಕುತ್ಯಾರು, ಸದಸ್ಯರಾದ ಶ್ರೀಕಾಂತ ತಂತ್ರಿ ಕಳತ್ತೂರು, ಜಯಕೃಷ್ಣ ಆಳ್ವ ಪಾದೂರು, ರಾಜೇಶ್ ಕುಲಾಲ್ ಬೊಬ್ಬೆಟ್ಟು, ದಿವಾಕರ ಡಿ. ಶೆಟ್ಟಿ ಕಳತ್ತೂರು, ಗಣೇಶ್ ನಾಯ್ಕ ಪೈಯ್ಯಾರು, ದಿವಾಕರ ಬಿ. ಶೆಟ್ಟಿ ಕಳತ್ತೂರು, ಮಮತಾ ಆಚಾರ್ಯ ಕುತ್ಯಾರು,ಮಮತಾ ತಂತ್ರಿ ಪಾದೂರು,ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅರುಣ್ ಶೆಟ್ಟಿ ಕಳತ್ತೂರು, ಪ್ರಮುಖರಾದ ಕುತ್ಯಾರು ಜಿನೇಶ್ ಬಲ್ಲಾಳ್, ಸತೀಶ್ ಶೆಟ್ಟಿ ಗುರ್ಮೆ, ಪೈಯ್ಯಾರು ಶಿವರಾಮ ಶೆಟ್ಟಿ, ಕಳತ್ತೂರು ಬರೆಬೆಟ್ಟು ರವೀಂದ್ರ ಶೆಟ್ಟಿ, ರಂಗನಾಥ ಶೆಟ್ಟಿ,ಗಣೇಶ್ ಶೆಟ್ಟಿ ಪೈಯ್ಯಾರು, ಜಗದೀಶ ಅರಸ, ಶಿರ್ವ ಬಂಟರ ಸಂಘದ ಅಧ್ಯಕ್ಷ ಕುತ್ಯಾರು ಸಾಯಿನಾಥ ಶೆಟ್ಟಿ, ಶಿರ್ವ ಸಿಎ ಬ್ಯಾಂಕಿನ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ವೀರೇಂದ್ರ ಪಾಟ್ಕರ್, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ರಾಜೇಶ್ ಶೆಟ್ಟಿ, ಶಬರಿ, ಪ್ರದೀಪ್ ಶೆಟ್ಟಿ, ನಡಿಗುತ್ತು ಗಣೇಶ್ ಶೆಟ್ಟಿ,ನವೀನ್ ಶೆಟ್ಟಿ, ವಸಂತ ಶೆಟ್ಟಿ, ಪ್ರಭಾಕರ ಶೆಟ್ಟಿ ಸಹನಾ ತಂತ್ರಿ,ರಾಘವೇಂದ್ರ ಭಟ್, ಜನಾರ್ಧನ ಆಚಾರ್ಯ, ಸ್ಥಳವಂದಿಗರು, ದೇಗುಲದ ಆರ್ಚಕವೃಂದ, ಸಿಬಂದಿ, ವಿವಿಧ ಭಜನಾ ಮಂಡಳಿಗಳ ಸದಸ್ಯರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು,ಕುತ್ಯಾರು- ಪಾದೂರು-ಕಳತ್ತೂರು ಗ್ರಾಮಸ್ಥರು ಮತ್ತು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ ಮಣಿಪಾಲ: ರಾಷ್ಟ್ರೀಯ ಹೆದ್ದಾರಿಯಲ್ಲಿ…
ಹಾಲಿನ ಬೆನ್ನಲ್ಲೇ ಗ್ರಾಹಕರಿಗೆ ನಂದಿನಿ ಮೊಸರಿನ ದರ ಏರಿಕೆ ಬಿಸಿ: ಲೀಟರ್‌ಗೆ 14 ರೂ. ಹೆಚ್ಚಳ; ನ.1 ರಿಂದ ಜಾರಿಗೆ …
ಕುಂದಾಪುರ: ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಸ್ಕೂಟರ್‌ಗೆ ಡಿಕ್ಕಿ; ಇಬ್ಬರಿಗೆ ಗಾಯ, ಮೂವರ ಬಂಧನ ಕುಂದಾಪುರ: ಅತಿವೇಗ ಮತ್ತು ನಿರ್ಲಕ್ಷ್ಯದ…
ಉಡುಪಿ: ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಯುವಕ ಆತ್ಮಹತ್ಯೆ ಉಡುಪಿ : ಉಡುಪಿ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅ.30…
ಉಡುಪಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ವಹಿಸಿ : ಕೋಟ ಶ್ರೀನಿವಾಸ ಪೂಜಾರಿ ಉಡುಪಿ…
ಮಂಗಳೂರು: ಕಂಬಳದಲ್ಲಿ ಗೆದ್ದ ಚಿನ್ನದ ಪದಕ ಅನಾರೋಗ್ಯಪೀಡಿತ ಮಾಜಿ ಕಾರ್ಮಿಕನಿಗೆ ಉಡುಗೊರೆ: ಪದವು ಕಾನಡ್ಕ ತಂಡದ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ…