Featured

ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್‌ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ – vishwanews24

ರಾ.ಹೆ. ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್‌ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ : ಸಂಸದ ಕೋಟ ಎಚ್ಚರಿಕೆ

ಮಣಿಪಾಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದುರಸ್ತಿ, ಬೀದಿ ದೀಪಗಳು, ಹೈ ಮಾಸ್ ದೀಪ ಹಾಗೂ ಮಾರ್ಗದ ಚರಂಡಿಯ ಇಕ್ಕೆಲಗಳಲ್ಲಿ ಬೇಲಿ ಅಳವಡಿಕೆ ರಾ.ಹೆ. ಪ್ರಾಧಿಕಾರ ಹಾಗೂ ಗುತ್ತಿಗೆದಾರರ ಜವಾಬ್ದಾರಿ. ರಸ್ತೆ ಅಪಘಾತ ತಪ್ಪಿಸಲು ಬ್ಲ್ಯಾಕ್ ಸ್ಪಾಟ್‌ಗಳನ್ನು ಸರಿಪಡಿಸಿ, ಅಗತ್ಯವಿರುವೆಡೆ ಬೇಲಿ ಅಳವಡಿಸಿ, ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಟೋಲ್ ಕಟ್ಟದಂತೆ ಜಿಲ್ಲೆಯ ಜನರಿಗೆ ಕರೆ ನೀಡುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಾ.ಹೆ. -66ರ ಸಂಬಂಧಿಸಿ ಕೋಟ, ತೆಕ್ಕಟ್ಟೆ, ಪಡುಬಿದ್ರಿ, ಬ್ರಹ್ಮಾವರ ಜಂಕ್ಷನ್ ಮುಂತಾದ ಸ್ಥಳಗಳಲ್ಲಿ ಸರಣಿ ಅಪಘಾತಗಳು ನಡೆಯುತ್ತಿರುವ ಬಗ್ಗೆ ಚರ್ಚಿಸಲು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆ ಅಭಿವೃದ್ಧಿ ಸಂಬಂಧಿಸಿ ರಾ. ಹೆ. ಪ್ರಾಧಿಕಾರದವರು ಏನೂ ಮಾಡುತ್ತಿಲ್ಲ. ಅಪಘಾತ ನಡೆದಲ್ಲಿ ಟೋಲ್ ಸಂಗ್ರಹಿ ಸುವ ಗುತ್ತಿಗೆ ಸಂಸ್ಥೆಯೇ ಆ್ಯಂಬುಲೆನ್ಸ್ ಪೂರೈಸಬೇಕು, ಅಗತ್ಯವಿದ್ದರೆ ಕ್ರೇನ್ ಕೂಡ ತರಬೇಕು. ಆದರೆ ಈ ಸಂಸ್ಥೆಯಿಂದ ಯಾವ ಸೇವೆಯೂ ದೊರೆಯುತ್ತಿಲ್ಲ ಎಂದು ದೂರಿದ ಅವರು, ಒಂದು ವಾರದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಸಹಿತ ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬೆಂಗಳೂರಿನ ಆರ್.ಒ. ಜತೆ ಸಭೆ ನಡೆಸಲಾಗುವುದು ಎಂದರು.

ಹೆದ್ದಾರಿಯಲ್ಲಿ ನಿರ್ವಹಣೆ ಕೊರತೆ ಯಿಂದ ಅಪಘಾತ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳ ಲಾಗುವುದು. ಜಿಲ್ಲೆಯಲ್ಲಿ ಹೊಸದಾಗಿ 22 ಬ್ಲ್ಯಾಕ್ ಸ್ಪಾಟ್ ಗುರುತಿಸಲಾಗಿದ್ದು, ಈ ಸ್ಥಳಗಳು ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ದಾರಿದೀಪ, ಸೂಚನಾ ಫಲಕ, ಬ್ಯಾರಿಕೇಡ್, ಬ್ಲಿಂಕ್ಸ್ ಅಳವಡಿಕೆ ಮತ್ತಿತರ ವೈಜ್ಞಾನಿಕ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಬೇಕು. ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಎನ್‌ಎಚ್‌ಐ ಕಚೇರಿ ಮುಂದೆ ಸಾರ್ವಜನಿಕರ ಜತೆ ಧರಣಿ ನಡೆಸಬೇಕಾದೀತು ಎಂದರು.

ರಿಯಾಯಿತಿ ಪಾಸ್ ನೀಡಿ
ರಾ.ಹೆ. ಟೋಲ್ ಪ್ಲಾಜಾಗಳ 20 ಕಿ.ಮೀ. ವ್ಯಾಪ್ತಿ ಒಳಗಿನವರಿಗೆ ನ.1ರಿಂದ ರಿಯಾಯತಿ ಪಾಸ್ ನೀಡುವ ಕುರಿತು ಪ್ರಾಧಿಕಾರ ಹಾಗೂ ಗುತ್ತಿಗೆ ದಾರರು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಸಂಸದರು ಹೇಳಿದರು.

ಕೇರಳ ಮಾದರಿ ರಸ್ತೆಗೆ ಸರ್ವೆ
ಕೇರಳ ಮಾದರಿ ರೀತಿಯಲ್ಲಿಯೇ ಕುಂದಾಪುರದಿಂದ ತಲಪಾಡಿಯವರೆಗೆ ಅಪಘಾತ ರಹಿತ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಡಿ.ಪಿ.ಆರ್ ಆಗುತ್ತಿದ್ದು, ಧ್ರುವ ಸಂಸ್ಥೆಯಿಂದ ಸರ್ವೆ ನಡೆಯುತ್ತಿದೆ. ಈ ಬಗ್ಗೆ ಶೀಘ್ರದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಾತ್ಯಕ್ಷಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು. 10 ತಿಂಗಳಲ್ಲಿ 94 ಸಾವು
ಜಿಲ್ಲೆಯ ಹೆದ್ದಾರಿಯಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ ನಡೆದ 297 ಅಪಘಾತ ಪ್ರಕರಣದಲ್ಲಿ 94 ಮಂದಿ ಸಾವನ್ನಪ್ಪಿದ್ದಾರೆ. 359 ಸಾಧಾರಣ ಹಾಗೂ ಗಂಭೀರ ಗಾಯಗೊಂಡಿದ್ದಾರೆ.

Vishwa News 24

Recent Posts

ರಾಜ್ಯೋತ್ಸವ ಪಟ್ಟಿಯಿಂದ ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ – vishwanews24

ರಾಜ್ಯೋತ್ಸವ ಪಟ್ಟಿ ತಿದ್ದುಪಡಿ: ಉಡುಪಿಯ ವೈದ್ಯ ಡಾ.ಚಂದ್ರಶೇಖರ್ ಹೆಸರು ಕೈಬಿಟ್ಟಿದಕ್ಕೆ ಸರಕಾರದ ವಿರುದ್ಧ ತೀವ್ರ ಅಸಮಾಧಾನ ಉಡುಪಿ: ಕರ್ನಾಟಕ ಸರಕಾರ…

1 hour ago

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು  – vishwanews24

ಬೆಂಗಳೂರು: ಖಾಸಗಿ ಹೋಟೆಲ್​​ನ ಈಜುಕೊಳದಲ್ಲಿ ವಿದ್ಯುತ್ ಅವಘಡ : ವಿದೇಶಿ ಪ್ರಜೆಗಳಿಬ್ಬರು ಸಾವು ; ಮತ್ತಿಬ್ಬರಿಗೆ ಗಂಭೀರ ಗಾಯ ಬೆಂಗಳೂರು: ಖಾಸಗಿ ಹೋಟೆಲ್​​ನ…

2 hours ago

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು – vishwanews24

ಮೂಡುಬಿದಿರೆ : ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ; ಸವಾರ ಮೃತ್ಯು ಮೂಡುಬಿದಿರೆ : ಖಾಸಗಿ ಬಸ್ ವೊಂದು ದ್ವಿಚಕ್ರ…

2 hours ago

ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ – vishwanews24

ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ ಸುರತ್ಕಲ್: ಬೆಂಗಳೂರು-ಕಾರವಾರ ನಡುವೆ ಸಂಚರಿಸಲಿರುವ ಹೊಸ ವಂದೇ…

2 hours ago

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ – vishwanews24

ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್‍ ಕುಮಾರ್ ಬೆಂಗಳೂರು: ಯುವ ಸಮುದಾಯಕ್ಕೆ ಎಸ್‍ಐಆರ್ ಕುರಿತಂತೆ…

2 hours ago

ಸ್ಟಿಂಗ್ ಆಪರೇಷನ್’ ಪ್ರಕರಣ :  ಕಾಂಗ್ರೆಸ್ ನಿಂದ ಕೃಪಾ ಆಳ್ವಾ ಉಚ್ಛಾಟನೆ – vishwanews24

ಸ್ಟಿಂಗ್ ಆಪರೇಷನ್' ಪ್ರಕರಣ :  ಕಾಂಗ್ರೆಸ್ ನಿಂದ ಕೃಪಾ ಆಳ್ವಾ ಉಚ್ಛಾಟನೆ ಬೆಂಗಳೂರು: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ…

2 hours ago