ಶಿರ್ವ  : ಬಡ ವಿಧವೆ ಮಹಿಳೆಗೆ ಹೊಸಮನೆ ಕಟ್ಟಿ ಕೊಟ್ಟ ಪಂಚಾಯತ್ ಉಪಾಧ್ಯಕ್ಷೆ – Vishwanews24

Featured, ಉಡುಪಿ

ಶಿರ್ವ  : ಬಡ ವಿಧವೆ ಮಹಿಳೆಗೆ ಹೊಸಮನೆ ಕಟ್ಟಿ ಕೊಟ್ಟ ಪಂಚಾಯತ್ ಉಪಾಧ್ಯಕ್ಷೆ

ಪಂಚಾ0ಗ ಹಾಕಿ ಸುಮಾರು ೪ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೊಸಮನೆಯ ಕನಸು ನನಸು ಮಾಡಿದ ಕೀರ್ತಿ ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀ ಗ್ರೇಸಿ ಕಾರ್ಡೊಜಾರವರಿಗೆ ಸಲ್ಲುತ್ತದೆ.

ಶಿರ್ವ ಗ್ರಾಮದ ಬಂಟಕಲ್ಲು ವಾರ್ಡ್ ಪೊದಮಲೆ ಎಂಬಲ್ಲಿ ವಾಸಿಸುತ್ತಿದ್ದ ಗಿರಿಜಾ ಮೂಲ್ಯ ಎಂಬ ಬಡ ವಿಧವೆ ಮಹಿಳೆಯು ಬೇರೆಯವರ ಜಾಗದಲ್ಲಿ ವಾಸಿಸಲು ಯೋಗ್ಯವಲ್ಲದ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ಆರ್ಥಿಕ ಅಡಚಣೆಯಿಂದಾಗಿ ಹೊಸಮನೆಗೆ ಪಂಚಾ0ಗ ಹಾಕಿದ್ದರೂ ಕೆಲಸ ಬಾಕಿ ಉಳಿದಿತ್ತು. ಇದನ್ನು ಮನಗಂಡು ಶಿರ್ವಗ್ರಾಮ ಪಂಚಾಯತ್ ಉಪಾಧ್ಯಕ್ಷೆ “ಶ್ರೀಮತಿ ಗ್ರೇಸಿ ಕಾರ್ಡೊಜರವರು ಅವರ ನೆರವಿಗೆ ಧಾವಿಸಿ ದಾನಿಗಳ ಸಹಕಾರದೊಂದಿಗೆ ಸದ್ರಿ ಮನೆಯ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಅವರಿಗೆ ಹೊಸಮನೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಪು : ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆ ; ಹಕ್ಕಿಗಳ ವಾಸಸ್ಥಳ ಗೂಡು ಸಮೇತ ಮರವನ್ನೇ ಕಡಿದ ಭೂಪರು – Vishwanews24

ಸದ್ರಿ ಹೊಸಮನೆ “ಆಶೀರ್ವಾದ” ಗೃಹಪ್ರವೇಶ ಕಾರ್ಯಕ್ರಮ ಇಂದು ದಿನಾಂಕ ೨೩/೦೫/೨೦೨೨ ರಂದು ಶ್ರೀಮತಿ ಗ್ರೇಸಿ ಕಾರ್ಡೊಜರವರ ವೈವಾಹಿಕ ಜೀವನದ ೩೪ನೇ ಸಂವತ್ಸರದ0ದು ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ವಿನಯಕುಮಾರ್ ಸೊರಕೆ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿಯವರು ಆಗಮಿಸಿ ಶುಭಕೋರಿದರು. ಪ್ರಮುಖ ದಾನಿಗಳಲ್ಲಿ ಒಬ್ಬರಾದ Save Life Trust ಮಂಗಳೂರು ಇದರ “ಅರ್ಜುನ್ ಭಂಡಾರ್ಕರ್, ರಾಮಕೃಷ್ಣ ಶರ್ಮ ಬಂಟಕಲ್ಲು, ಪೀಟರ್ ಕೋರ್ಡಾ ಹಾಜರಿದ್ದು ಅವರನ್ನು ಸನ್ಮಾನಿಸಲಾಯಿತು. ಶ್ರೀಮತಿ ಗ್ರೇಸಿ ಕಾರ್ಡೊಜ ದಂಪತಿಗಳನ್ನು ಕೂಡಾ ಸನ್ಮಾನಿಸಲಾಯಿತು. ನ್ಯಾಯವಾದಿ ಮೆಲ್ವಿನ್ ಡಿಸೋಜ ಸ್ವಾಗತಿಸಿ ಪ್ರಾಸ್ತವಿಕ ಮಾತಗಳಾನ್ನಾಡಿದರು. ದಾನಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಮಾಜ ಸೇವಕ ಸುರೇಶ್ ಆಚಾರ್ಯರವರು ಧನ್ಯವಾದವಿತ್ತರು. ಊಟದ ವ್ಯವಸ್ಥೆ ಮಾಡಲಾಯಿತು.

ಸುಮಾರು ನಾಲ್ಕು ಲಕ್ಷ ವೆಚ್ಚದಲ್ಲಿ ಹೊಸಮನೆಯ ನಿರ್ಮಾಣವಾಗಿದೆ. ಶಿರ್ವ ಗ್ರಾಮ ಪಂಚಾಯತ್‌ನ ಸಹಕಾರದೊಂದಿಗೆ ಮನೆ ನಿರ್ಮಾಣದ ಕೆಲಸವಾಗಿದೆ. ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗ್ರೇಸಿ ಕಾರ್ಡೊಜಾರವರೊಂದಿಗೆ ಶಿರ್ವ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶ್ರೀ ಮೆಲ್ವಿನ್ ಡಿಸೋಜರವರು ಈ ಉತ್ತಮ ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ರತನ್ ಶೆಟ್ಟಿ, ಸುಹಾಸ್ ಪೂಜಾರಿ, ಶ್ರೀಮತಿ ಸುಜಾತ ಪೂಜಾರ್ತಿ, ಗೀತಾ ನಾಯಕ್, ಸತೀಶ್ ಬಂಟಕಲ್ಲು, ಶ್ರೀಮತಿ ಗೀತಾ ವಾಗ್ಳೆ, ಶ್ರೀ ವಿಲ್ಸನ್ ರೊಡ್ರಿಗಸ್, ಸಮಾಜ ಸೇವಕ ಶ್ರೀ ಸುರೇಶ್ ಆಚಾರ್ಯ, ಗ್ರೇಸಿ ಕಾರ್ಡೊಜಾರವರ ಪತಿ ರೋಬರ್ಟ ಕಾರ್ಡೊಜಾ ಮಗಳು ರಿಶಲ್ ಕಾರ್ಡೊಜಾ, ರೀಟಾ ಮತಾಯಸ್ ಮತ್ತು ಶಿರ್ವ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಉಡುಪಿ:ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕ್ರೈಸ್ತ ಅಭ್ಯರ್ಥಿಗೆ ಅವಕಾಶ ನೀಡದಿರುವುದು ಸಮುದಾಯಕ್ಕೆ ಮಾಡಿದ ಅವಮಾನ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ – Vishwanews24

Leave a Reply