ಶಿರ್ವ:  ಮನೆಗೆ ಕನ್ನ ; ಅಪಾರ ಮೌಲ್ಯದ ನಗ-ನಗದು ದೋಚಿ ಪರಾರಿ – Vishwanews24

Featured, ಉಡುಪಿ

ಶಿರ್ವ:  ಮನೆಗೆ ಕನ್ನ ; ಅಪಾರ ಮೌಲ್ಯದ ನಗ-ನಗದು ದೋಚಿ ಪರಾರಿ

ಶಿರ್ವ : ಕಾಪುವಿನ ಬೆಳಪು ಗ್ರಾಮದ ಜವನರ ಕಟ್ಟೆ‌ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ನಗ-ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಸ್ಥಳೀಯ ನಿವಾಸಿ ಮುಬಶಿರ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಆ.20 ರ ಸಂಜೆಯಿಂದ ಆ.21 ರ ಬೆಳಗ್ಗಿನ ನಡುವಿನ ಅವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದು ಅದರೊಳಗಿದ್ದ ಸುಮಾರು 20,000 ರೂ. ಬೆಲೆ ಬಾಳುವ 4 ಗ್ರಾಂ. ತೂಕದ ಚಿನ್ನದ ಸರ ಹಾಗೂ 10,000‌ ರೂ. ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply