ಶಿವಮೊಗ್ಗ : ಮಾಸ್ಕ್ ಧರಿಸಿ ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು  – Vishwanews24

Featured, ರಾಜ್ಯ ನ್ಯೂಸ್

ಶಿವಮೊಗ್ಗ : ಮಾಸ್ಕ್ ಧರಿಸಿ ದೇಗುಲದ ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಶಿವಮೊಗ್ಗ : ಶಿವಮೊಗ್ಗದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮೆರೆದಿದ್ದು, ರಾಗಿಗುಡ್ಡದ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.

ರಾಗಿಗುಡ್ಡದ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ರಥಕ್ಕೆ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಘಟನೆಯಿಂದ ರಥ ಬಹುಪಾಲು ಹಾನಿಗೊಳಗಾಗಿದೆ.

ಈಘಟನೆ ಮಾ.4 ರಂದು ನಡೆದಿದೆ ಎಂದು ದೇವಸ್ಥಾನದ ಅರ್ಚಕ ರಾಘವೇಂದ್ರ ತಿಳಿಸಿದ್ದಾರೆ.

H3N2 ವೈರಸ್‌ ಸಹ ಕೋವಿಡ್‌ನಂತೆ ಹರಡುತ್ತದೆ :  AIIMS ಮಾಜಿ ಮುಖ್ಯಸ್ಥ ರಣದೀಪ್ ಗುಲೇರಿಯಾ – Vishwanews24

ಘಟನೆ ಸಂಬಂಧ ದೇವಸ್ಥಾನದ ಅರ್ಚಕ ರಾಘವೇಂದ್ರ ದೂರು ಸಲ್ಲಿಸಿದ್ದಾರೆ. ಮಾಸ್ಕ್ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply