ಶ್ರೀಲಂಕ ಆರ್ಥಿಕ ಬಿಕ್ಕಟ್ಟು : 24 ಗಂಟೆಗಳಲ್ಲಿ 76,000 ಟನ್‌ ಇಂಧನ ಪೂರೈಕೆ ಮಾಡಿದ ಭಾರತ – Vishwanews24

Featured, ರಾಷ್ಟ್ರ ನ್ಯೂಸ್

ಶ್ರೀಲಂಕ ಆರ್ಥಿಕ ಬಿಕ್ಕಟ್ಟು : 24 ಗಂಟೆಗಳಲ್ಲಿ 76,000 ಟನ್‌ ಇಂಧನ ಪೂರೈಕೆ ಮಾಡಿದ ಭಾರತ

ನವದೆಹಲಿ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾಕ್ಕೆ ಭಾರತವು ಇಂಧನವನ್ನು ಪೂರೈಕೆ ಮಾಡಿದ್ದು,ಇದರಿಂದಾಗಿ ಲಂಕಾದ ದೇಶೀಯ ಆರ್ಥಿಕ ಸ್ಥಿತಿ ಸ್ಥಿರವಾಗಿರಿಸಲು ನೆರವಾಗಲಿದೆ ಎಂದು ವರದಿ ತಿಳಿಸಿದೆ.

ಭಾರತವೂ ಕಳೆದ 24 ಗಂಟೆಗಳಲ್ಲಿ ಒಟ್ಟು 76,000 ಟನ್‌ಗಳಷ್ಟು ಇಂಧನವನ್ನು ನೆರೆ ರಾಷ್ಟ್ರ ಶ್ರೀಲಂಕಾಕ್ಕೆ ತಲುಪಿಸಿದೆ. ಭಾರತದ ನೆರವಿನ ಅಡಿಯಲ್ಲಿ 2,70,000 ಟನ್‌ಗಳಿಗಿಂತ ಹೆಚ್ಚು ಇಂಧನ ಪೂರೈಸಿದೆ.

ಶ್ರೀಲಂಕಾ ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಸಿಲುಕಿದ್ದು , ಆರ್ಥಿಕ ಬಿಕ್ಕಟ್ಟು ಕೂಡಾ ದ್ವೀಪ ರಾಷ್ಟ್ರವನ್ನು ಕಂಗೆಡಿಸಿದೆ. ಇನ್ನೊಂದೆಡೆ ಜನರ ಪ್ರತಿಭಟನೆಗಳು ಉಲ್ಬಣಗೊಳ್ಳುತ್ತಿತ್ತು ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ.

ದ್ವೀಪರಾಷ್ಟ್ರ ಶ್ರಿಲಂಕಾದಲ್ಲಿ 22 ಮಿಲಿಯನ್ ಜನರು ತೀವ್ರ ಆಹಾರ ಕೊರತೆ, ಇಂಧನ ಹಾಗೂ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಲಂಕಾದಲ್ಲಿ ಹಾಲು, ಅಕ್ಕಿ, ಸಕ್ಕರೆ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. 1948ರಲ್ಲಿ ಸ್ವತಂತ್ರಗೊಂಡ ನಂತರ ಶ್ರೀಲಂಕಾದಲ್ಲಿ ಇದೇ ಮೊದಲ ಬಾರಿ ತೀವ್ರ ಆರ್ಥಿಕ ಬಿಕ್ಕಟ್ಟು, ಆಹಾರ ಕೊರತೆ ಎದುರಿಸುವಂತಾಗಿದೆ.

ಹಿಜಾಬ್ ಧರಿಸಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವಂತಿಲ್ಲ : ಬಿ.ಸಿ.ನಾಗೇಶ್ ಸ್ಪಷ್ಟನೆ – Vishwanews24

 

Leave a Reply