ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೆಜಮಾಡಿ – ಹೆಜಮಾಡಿ ಆಸುಪಾಸಿನ ಗರಡಿ ಅರ್ಚಕರಿಗೆ ಆಹಾರದ ಕಿಟ್‌ ವಿತರಣೆ.-vishwanews24

Featured, ಉಡುಪಿ

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೆಜಮಾಡಿ – ಹೆಜಮಾಡಿ ಆಸುಪಾಸಿನ ಗರಡಿ ಅರ್ಚಕರಿಗೆ ಆಹಾರದ ಕಿಟ್‌ ವಿತರಣೆ.

ಕಾಪು: ಶ್ರೀ ಬ್ರಹ್ಮ ಬೈದರ್ಕಳ ಗರಡಿ ಹೆಜಮಾಡಿಯಲ್ಲಿ ದಿನಾಂಕ 04.07.2021 ರಂದು ಹೆಜಮಾಡಿ ಆಸುಪಾಸಿನ ಸುಮಾರು 11 ಗರಡಿಯ ಅರ್ಚಕರಿಗೆ ಶ್ರೀ ರಮೇಶ್ ಪಿ ಸಾಲ್ಯಾನ್‌ ರವರ ವತಿಯಂದ ಆಹಾರದ ಕಿಟ್‌ ವಿತರಿಸಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ‍ಶ್ರೀ ಲೋಕೇಶ್‌ ಅಮೀನ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡುಗೈ ದಾನಿ ಶ್ರೀ ರಮೇಶ್ ಪಿ ಸಾಲ್ಯಾನ್‌, ಮುಲ್ಕಿ ನಗರ ಪಂಚಾಯತ್‌ ನ ಸದಸ್ಯ ‍ಶ್ರೀ ಯೋಗೀಶ್‌ ಕೋಟ್ಯಾನ್‌, ಉದ್ಯಮಿ ಶ್ರೀ ಹರೀಂದ್ರ ಸುವರ್ಣ, ಹೆಜಮಾಡಿ ಗರಡಿಯ ಅರ್ಚಕರಾದ ‍ಶ್ರೀ ಗುರುರಾಜ ಪೂಜಾರಿ, ಹೆಜಮಾಡಿ ಬಿಲ್ಲವರ ಸಂಘದ ಕಾರ್ಯದರ್ಶಿ ಶ್ರೀಮತಿ ಸುನೀತ ಕರ್ಕೇರ, ಕೋಶಾಧಿಕಾರಿ ಪ್ರಭೋದ್‌ ಚಂದ್ರ ಹೆಜಮಾಡಿ, ರಮೇಶ್‌ ಪಿ ಸಾಲ್ಯಾನ್‌ ರವರ ಧರ್ಮಪತ್ನಿ ದೇವಿಕಾ ಇವರುಗಳು ಉಪಸ್ಥಿತರಿದ್ದರು.

ಪ್ರಭೋದ್‌ ಚಂದ್ರ ಹೆಜಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದರು, ಸುಧೀರ್‌ ಕರ್ಕೇರ ಧನ್ಯವಾದ ನೀಡಿದರು, ಮನೋಹರ್‌ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು.