ಸಂಘಟನೆ ಇಲ್ಲದಿದ್ದರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ : ವಿನಯ್ ಗುರೂಜಿ -Vishwanews24
ಸಂಘಟನೆ ಇಲ್ಲದಿದ್ದರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ, ಸಂಘಟನೆ ಮೂಲಕ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ : ವಿನಯ್ ಗುರೂಜಿ -Vishwanews24
ಸಮಾಜದಲ್ಲಿ ರಾಜಕೀಯ ಮಾಡುವುದು ನನ್ನ ಉದ್ದೇಶವಲ್ಲ. ದೇಶ ಕಟ್ಟುವುದೇ ನಮ್ಮ ಉದ್ದೇಶ..
ಬಾಳೆಹೊನ್ನೂರು: ಸಂಘಟನೆ ಇಲ್ಲದಿದ್ದರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ಸಂಘಟನೆ ಮೂಲಕ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ರಾಜಕೀಯ ಮಾಡುವುದು ನನ್ನ ಉದ್ದೇಶವಲ್ಲ. ದೇಶ ಕಟ್ಟುವುದೇ ನಮ್ಮ ಉದ್ದೇಶ ಎಂದು ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕರೂ ಆದ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ನುಡಿದರು.
ಇಲ್ಲಿಗೆ ಸಮೀಪದ ಸೀಗೋಡು-ದೇವಗೋಡು ಗ್ರಾಮದ 2.20 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಡಿಸಿಎಂ ಗೋವಿಂದ ಕಾರಜೋಳ ಅವರ ಸಹಕಾರದಿಂದ ಸೀಗೋಡು ದೇವಗೋಡು ರಸ್ತೆಗೆ 1.5 ಕೋಟಿ ರು. ಹಾಗೂ ಶಾಸಕ ರಾಜೇಗೌಡ ಅನುದಾದಲ್ಲಿ 70 ಲಕ್ಷ ರು. ಅಭಿವೃದ್ಧಿ ಕಾಮಗಾರಿಗಾಗಿ ಮಂಜೂರಾಗಿರುವುದು ಶ್ಲಾಘನೀಯ ಎಂದರು.
ಮಾನವ ಸೇವೆಯೇ ಮಾಧವ ಸೇವೆಯಾಗಿದೆ. ಜಾತಿ, ಧರ್ಮ, ತತ್ವ ಎಲ್ಲವನ್ನೂ ಮೀರಿದ್ದೆ ಮನುಷ್ಯತ್ವ. ಮನುಷ್ಯತ್ವವೇ ದೇವರಾಗಿದ್ದು, ದೇವರನ್ನು ಮೀರಿರುವುದು ಸತ್ಯ ಮತ್ತು ಪ್ರೀತಿಯಾಗಿದೆ. ಹಳ್ಳಿಗಳ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಈ ನಿಟ್ಟಿನಲ್ಲಿ ತಮ್ಮ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸಹ ಕಾರ್ಯನಿರ್ವಹಿಸುತ್ತಿದೆ. ರೈತ ನಿಧಿ ಆರಂಭಿಸಲಾಗಿದೆ ಎಂದು ಹೇಳಿದರು
ಕೆಂಪುಕೋಟೆಯಲ್ಲಿ ಕಿಸಾನ್ ಯೂನಿಯನ್ ಧ್ವಜ ಹಾರಿಸಿದ ರೈತ -Vishwanews24
ಸಿಎಂ ಯಡಿಯೂರಪ್ಪ ನಮ್ಮ ಆಶ್ರಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೋ ಹತ್ಯೆ ನಿಷೇಧವಾಗಬೇಕು. ರೈತರ ಸಾಲ ಮನ್ನಾ ಆಗಬೇಕು ಎಂದು ಕೋರಿದ್ದೆವು. ಯಡಿಯೂರಪ್ಪ ಅವರು ಅದನ್ನು ನೆರವೇರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಅದೇ ನನಗೆ ನೀಡುವ ಗುರುದಕ್ಷಿಣೆ ಎಂದು ನಾನು ಹೇಳಿದ್ದೆ. ರಾಸಾಯನಿಕ ಗೊಬ್ಬರ ಬಳಕೆಯನ್ನು ನಾವು ನಿಲ್ಲಿಸಬೇಕಿದೆ. ಮನುಷ್ಯ ದುರಾಸೆಯಿಂದ ಬೇಗ ಹಣ ಮಾಡಬೇಕು ಎಂಬ ಉದ್ದೇಶದಿಂದ ತಮ್ಮ ಜಮೀನಿಗೆ ರಾಸಾಯನಿಕ ಗೊಬ್ಬರವನ್ನು ಹಾಕುತ್ತಿದ್ದಾನೆ. ಇದರಿಂದಾಗಿ 100 ವರ್ಷ ಬಾಳುವ ಮರಗಳು 10 ವರ್ಷಕ್ಕೆ ಕೊನೆಗಾಣುತ್ತಿವೆ. ರಾಸಾಯನಿಕದಿಂದ ಕ್ಯಾನ್ಸರ್ ಇಂದು ನಮ್ಮನ್ನು ಆವರಿಸುತ್ತಿದೆ. ಭಾರತ ಸಂಸ್ಕಾರದಿಂದ ದೊಡ್ಡದಾದ ದೇಶ. ಇದು ದುಡ್ಡಿನಿಂದ ದೊಡ್ಡದಾದಲ್ಲ. ಸಾಧನೆ, ಶೋಧನೆಯಿಂದ ನಾವು ಮುಂದೆ ಸಾಗೋಣ. ದೇವಸ್ಥಾನ ಕೇವಲ ದೇವರಿಗೆ ಸೀಮಿತವಲ್ಲ. ಪುರಾತನ ದೇವಸ್ಥಾನದಲ್ಲಿರುವ ಇರುವ ವಿಜ್ಞಾನವನ್ನು ನಮ್ಮ ಜನ ಅರಿತಿಲ್ಲ ಎಂದರು.
ವಿನಯ್ ಗುರೂಜಿ ಅವರು ಸೀಗೋಡು ಗ್ರಾಮದ ಕೆಫೆ ಕಾಫಿ ಡೇ ಮಾಲೀಕ ದಿ.ಸಿದ್ಧಾಥ್‌ರ್ ಹೆಗ್ಡೆ ಅವರ ವೃತ್ತದ ಸಮೀಪದಲ್ಲಿ ಸಿದ್ಧಾಥ್‌ರ್ ಮಹಾದ್ವಾರ ನಿರ್ಮಾಣ ಕಾರ್ಯಕ್ಕೂ ಸಹ ಗುದ್ದಲಿ ಪೂಜೆ ನೆರವೇರಿಸಿದರು.
