ಸಂವಿಧಾನ ರಕ್ಷಣೆಗೆ ಎರಡನೆ ಸ್ವಾತಂತ್ರ್ಯ ಚಳವಳಿ ಅಗತ್ಯ : ರಮಾನಾಥ ರೈ -Vishwanews24
ಮಂಗಳೂರು: ದೇಶದ ಸಂವಿಧಾನ ವಿರೋಧಿಯಾದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಕೇಂದ್ರದ ಸರಕಾರದ ವಿರುದ್ಧ ದೇಶದ ಎಲ್ಲಾ ವರ್ಗಗಳ ಜನರು ಎರಡನೆ ಸ್ವಾತಂತ್ರ ಚಳವಳಿ ನಡೆಸುವುದು ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಪುರಭವನದ ಅಂಬೇಡ್ಕರ್ ಪ್ರತಿಮೆಯ ಎದುರು ಏರ್ಪಡಿಸಿದ್ದ ಒಂದು ದಿನದ ಸಾಮೂಹಿಕ ಧರಣಿ ಉದ್ದೇಶಿಸಿ ಅವರು ಮಾತನಾಡಿದರು.
