ಸುಬ್ರಹ್ಮಣ್ಯ: ಮಂಗಳೂರು- ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೇ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ, ನೈಋತ್ಯ ರೈಲ್ವೇ ನ. 2ರಿಂದ ಡಿ. 15ರ ವರೆಗೆ ಪ್ರತೀದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದ್ದು, ಈ ಕಾರಣದಿಂದಾಗಿ ಕೆಲವು ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 16539 ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮೊದಲು ನ. 1ರ ರವರೆಗೆ ರದ್ದುಗೊಂಡಿತ್ತು. ಈಗ ನ. 8ರಿಂದ ಡಿ. 13ರ ವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಮೊದಲು ನ. 2ರ ವರೆಗೆ ರದ್ದುಗೊಂಡಿತ್ತು, ಈಗ ನ. 9ರಿಂದ ಡಿ. 14ರ ವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ಮೊದಲು ಅ. 30ರ ವರೆಗೆ ರದ್ದುಗೊಂಡಿತ್ತು. ಈಗ ನ. 2ರಿಂದ ಡಿ. 14ರ ವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್- ಯಶವಂತಪುರ ಎಕ್ಸ್‌ಪ್ರೆಸ್ ಮೊದಲು ಅ. 30 ರವರೆಗೆ ರದ್ದುಗೊಂಡಿತ್ತು. ಈಗ ನ. 3ರಿಂದ ಡಿ. 15ರ ವರೆಗೆ ರದ್ದುಗೊಳ್ಳಲಿದೆ.
ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್ ಮೊದಲು ಅ. 31ರ ವರೆಗೆ ರದ್ದುಗೊಂಡಿತ್ತು. ಈಗ ನ. 3ರಿಂದ ಡಿ. 15ರ ವರೆಗೆ ರದ್ದುಗೊಳ್ಳಲಿದೆ. ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ ಎಕ್ಸ್‌ಪ್ರೆಸ್ ಮೊದಲು ನ. 1ರ ವರೆಗೆ ರದ್ದುಗೊಂಡಿತ್ತು. ಈಗ ನ. 4ರಿಂದ ಡಿ. 16ರ ವರೆಗೆ ರದ್ದುಗೊಳ್ಳಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ: ಮನೆಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ ವಿದೇಶಿ ಕರೆನ್ಸಿ ಸಹಿತ 23.56 ಲಕ್ಷ ರೂ.ಮೌಲ್ಯದ ಸೊತ್ತು ವಶ ಉಡುಪಿ:…
ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ: ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅಭಯ ಹೊಸದಿಲ್ಲಿ: "ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ…
ಕರ್ನಾಟಕದಲ್ಲಿ ಹೆಚ್ಚುತ್ತಿರುವ H1N1 ಪ್ರಕರಣ : ಆತಂಕ ಬೇಡ ಎಂದ ಆರೋಗ್ಯ ಇಲಾಖೆ ಬೆಂಗಳೂರು: ಕರ್ನಾಟಕದಲ್ಲಿ H1N1 ಹಾಗೂ ಇನ್ಫ್ಲುಯೆನ್ಸ…
ಮೈಸೂರಿನಲ್ಲಿ ಕಂಬಳಕ್ಕೆ ಸಿದ್ಧತೆ : ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಚಾಲನೆ ಮೈಸೂರು: ಸಾತಗಳ್ಳಿ ಪ್ರದೇಶದಲ್ಲಿ…
ನೇಪಾಳ ಭೀಕರ ಪ್ರವಾಹ : 5 ಲಕ್ಷ ಡಾಲರ್‌ಗಳ ತುರ್ತು ನೆರವು ಘೋಷಿಸಿದ ಅಮೆರಿಕ ಕಠ್ಮಂಡು: ನೇಪಾಳದ ಭೋಟೆ ಕೋಶಿ…
ಮಂಗಳೂರು ನೈಋತ್ಯ ವಲಯ ಸೇರ್ಪಡೆ ; ಶೀಘ್ರ ಸಂಭ್ರಮೋತ್ಸವ: ಸತೀಶ್ ಕುಂಪಲ ಮಂಗಳೂರು : ರೈಲ್ವೇ ಪ್ರದೇಶವನ್ನು ನೈಋತ್ಯ ವಲಯಕ್ಕೆ…