ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ – vishwanews24
ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ
ಬೆಂಗಳೂರು: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಡುಗಡೆ ಮಾಡಿದ ಅಧಿಕೃತ ಪಟ್ಟಿಯಲ್ಲಿ ಶಾಸಕ ಮಂಕಾಳ ವೈದ್ಯ ಅವರ ಹೆಸರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ಸೇರಿಸಲಾಗಿದೆ.
ಈ ಕುರಿತು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸ್ಪಷ್ಟನೆ ನೀಡಿದ್ದು, ಮಂಕಾಳ ವೈದ್ಯ ಅವರ ಹೆಸರು ಅಧಿಕೃತ ಪಟ್ಟಿಯಲ್ಲಿ ಎಂದಿಗೂ ಇರಲಿಲ್ಲ ಎಂದು ತಿಳಿಸಿದೆ. ಈ ಹಿಂದೆ ಪ್ರಕಟವಾಗಿದ್ದ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದ್ದು, ಅದು ಟೈಪಿಂಗ್ ದೋಷದಿಂದ ಸೇರ್ಪಡೆಯಾಗಿತ್ತು ಎಂದು ಹೇಳಿದೆ.
ರೈಲ್ವೆ ಪ್ರಯಾಣಿಕರ ಗಮನಕ್ಕೆ : ಮಂಗಳೂರು-ಬೆಂಗಳೂರು ಹಲವು ರೈಲುಗಳ ಸಂಚಾರ ಬಂದ್ -vishwanews24
ಈ ಪಟ್ಟಿಯು ವ್ಯಾಪಕ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಎಐಸಿಸಿ ಪರಿಷ್ಕೃತ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹೆಸರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ.
