ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ : ಬೈಂದೂರಿನ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು – Vishwanews24

Featured, ಉಡುಪಿ

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ : ಬೈಂದೂರಿನ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲು 

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್

ಬೈಂದೂರು ಮೂಲದ ವ್ಯಕ್ತಿ ಯ ಮೇಲೆ ಕೇಸ್ ದಾಖಲು

ಉಡುಪಿ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಲಕ್ಷ್ಮೀಕಾಂತ ಬೈಂದೂರು ಎಂಬ ವ್ಯಕ್ತಿಯ ಫೇಸ್ ಬುಕ್ ಖಾತೆ

ಫಾಜಿಲ್ ಹತ್ಯೆಯ ಆರೋಪಿಗಳನ್ನು ಹೀರೋಗಳು ಎಂದು ಬರೆದಿದ್ದ ಪೋಸ್ಟ್

ಪ್ರವೀಣ್ ಹತ್ಯೆಗೆ ಪ್ರತೀಕಾರ ಹೇಗಿತ್ತು ಎಂಬ ಬರಹದ ಮೇಲೆ ಪ್ರಕರಣ ದಾಖಲು

ಒಬ್ಬ ಪ್ರವೀಣ್ ಗೆ ಒಬ್ಬ ಫಾಜಿಲ್ ಸಾಕಾಗಲ್ಲ ಎಂದು ಬರೆದಿದ್ದ FB ಖಾತೆ

ಕೋಮು ಪ್ರಚೋದನೆ ಹಿನ್ನಲೆಯಲ್ಲಿ ಕೇಸ್ ದಾಖಲು

ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್ ಬುಕ್ ಖಾತೆದಾರ ಆತನ ಫೇಸ್ ಬುಕ್ ಖಾತೆಯಲ್ಲಿ ಮಂಗಳೂರಿನಲ್ಲಿ ಕೊಲೆಯಾಗಿ ಮೃತಪಟ್ಟಿರುವ ಪ್ರವೀಣ್ ಎಂಬಾತನ ಫೋಟೋವನ್ನು ಬಳಸಿ ಒಂದು ಕೊಲೆಗೆ ಪ್ರತಿಕಾರ ಹೇಗಿತ್ತು ಎಂಬುದಾಗಿ ಪ್ರಚೋದನಾಕಾರಿ  ಬರಹವನ್ನು ಬರೆದು ರಲ್ಲಿ ಪೋಸ್ಟ್ ಮಾಡಿರುವುದು ಹಾಗೂ ದಿನಪತ್ರಿಕೆಯಲ್ಲಿ ಬಂದಿರುವ ಮಂಗಳೂರಿನಲ್ಲಿ ನಡೆದ ಫಾಜಿಲ್  ಹತ್ಯೆಯ ಆರೋಪಿಗಳ ಫೋಟೋವನ್ನು ಬಳಸಿ, “ ಇವತ್ತಿನ ಹೀರೋಗಳು ” ಎಂಬ ಬರಹವನ್ನು ಬರೆದು ಪೋಸ್ಟ್ ಮಾಡಿದ್ದು, ಈ ರೀತಿಯಾಗಿ ಸುಳ್ಳು, ಪ್ರಚೋದನಾಕಾರಿ ಹಾಗೂ ಕೋಮು ಪ್ರಚೋದನೆ ಪೋಸ್ಟ್ ನ್ನು ಹರಿಯಬಿಟ್ಟಿರುವುದು ಕಂಡುಬಂದಿದ್ದು ಈತನ ವಿರುದ್ದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಯ ಭಾರಿ ಮಳೆಗೆ ಭೂಕುಸಿತ : ಮಾಣಿ–ಮೈಸೂರು ಹೆದ್ದಾರಿ: ಭಾರಿ ವಾಹನಗಳಿಗೆ ನಿರ್ಬಂಧ – Vishwanews24

Leave a Reply