ಸಿಎಂ ಸ್ಥಾನ ಕೊಡ್ತೀವಿ ಅಂದ್ರೂ ಕೂಡ ರಾಜೀನಾಮೆ ಹಿಂದೆ ಪಡೆಯುವ ಮಾತೇ ಇಲ್ಲ : ಶಾಸಕ ರಾಮಲಿಂಗಾರೆಡ್ಡಿ -Vishwanews24
ಬೆಂಗಳೂರು : ಮೈತ್ರಿ ಆಡಳಿತದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇನೆ. ಹೀಗಾಗಿ ಅವರು ಡಿಸಿಎಂ ಅಲ್ಲ, ಸಿಎಂ ಸ್ಥಾನ ಕೊಡ್ತೀವಿ ಅಂದ್ರೂ ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂದೆ ಪಡೆಯುವ ಮಾತೇ ಇಲ್ಲ ಎಂದು ಶಾಸಕ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಮಲಿಂಗಾರೆಡ್ಡಿ, ರಾಜೀನಾಮೆ ನೀಡುವ ಮೊದಲೇ ತಪ್ಪುಗಳನ್ನು, ಮೈತ್ರಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಅನೇಕ ಬಾರಿ ನಾಯಕರಿಗೆ ತಿಳಿಸಲಾಗಿತ್ತು. ಆದರೇ ಯಾರೊಬ್ಬರೂ ಆ ಕಾರ್ಯವನ್ನು ಮಾಡಲಿಲ್ಲ. ಹೀಗಾಗಿ ಮೈತ್ರಿ ಸರ್ಕಾರದ ನಡೆ ಬೇಸರ ತಂದಿತು ಇದರಿಂದಾಗಿಯೇ ಶಾಸಕರು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ರಾಮಲಿಂಗಾರೆಡ್ಡಿ ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ನಿಂದ ಸಚಿವ ಸ್ಥಾನದ ಆಫರ್ ನೀಡಲಾಗುತ್ತಿದೆ ಈಗ ರಾಜೀನಾಮೆ ಹಿಂದೆ ಪಡೆದು, ಸಚಿವರಾಗಲೂ ಹೋಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶಾಸಕ ರಾಮಲಿಂಗಾರೆಡ್ಡಿ, ಅವರು ಉಪಮುಖ್ಯಮಂತ್ರಿಯಲ್ಲ, ಸಿಎಂ ಸ್ಥಾನ ಕೊಡ್ತೀನಿ ಅಂದರೂ ರಾಜೀನಾಮೆ ಹಿಂದೆ ಪಡೆಯುವ ಮಾತೇ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

