ಸಿಎಸ್​ಕೆ ನಾಯಕತ್ವದಿಂದ ಕೆಳಗಿಳಿದ ಧೋನಿ : ನೂತನ ನಾಯಕನಾಗಿ ಋತುರಾಜ್‌ ಗಾಯಕ್ವಾಡ್‌  ನೇಮಕ – Vishwanews24

Featured, ರಾಷ್ಟ್ರ ನ್ಯೂಸ್

ಸಿಎಸ್​ಕೆ ನಾಯಕತ್ವದಿಂದ ಕೆಳಗಿಳಿದ ಧೋನಿ –  – ನೂತನ ನಾಯಕನಾಗಿ ಋತುರಾಜ್‌ ಗಾಯಕ್ವಾಡ್‌  ನೇಮಕ

ಚೆನ್ನೈ: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವದಿಂದ ಲೆಜೆಂಡ್‌ ಎಂ.ಎಸ್‌ ಧೋನಿ ಕೆಳಗಿಳಿದಿದ್ದಾರೆ. ಅವರ ಬದಲಿಗೆ ನೂತನ ನಾಯಕನಾಗಿ ಬಲಗೈ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌  ನೇಮಕಗೊಂಡಿದ್ದಾರೆ.

2024ರ ಐಪಿಎಲ್‌ ಟೂರ್ನಿ ಆರಂಭಕ್ಕೆ ಒಂದು ದಿನ ಮುಂಚಿತವಾಗಿಯೇ ಧೋನಿ ನಾಯಕ ಸ್ಥಾನದಿಂದ ಕೆಳಗಿಳಿದಿದ್ದು, 2024ರ ಟೂರ್ನಿಯಲ್ಲಿ ಋತುರಾಜ್‌ ಹಾಲಿ ಚಾಂಪಿಯನ್ಸ್‌ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರು: ಮೆಟ್ರೋ  ಟ್ರ್ಯಾಕ್‌ಗೆ ಜಿಗಿದು ಯುವಕ ಆತ್ಮಹತ್ಯೆ  – Vishwanews24

2019ರಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿರುವ ಋತುರಾಜ್‌ ಗಾಯಕ್ವಾಡ್ 52‌ ಪಂದ್ಯಗಳು 51 ಇನ್ನಿಂಗ್ಸ್‌ಗಳಲ್ಲಿ 1,797 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ, 14 ಅರ್ಧಶತಕ, 159 ಬೌಂಡರಿ, 73 ಸಿಕ್ಸರ್‌ಗಳನ್ನ ಒಳಗೊಂಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ (Cricket Fans) ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದ ಪರವಾಗಿಯೇ ಆಡಿದ್ದಾರೆ.

ಕುಂದಾಪುರ: ಈ ಬಾರಿ ಜನ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆಯಿದೆ :  ಗೀತಾ ಶಿವರಾಜ್‌ ಕುಮಾರ್‌ – Vishwanews24

2022ರ ಆವೃತ್ತಿಯಲ್ಲಿ ಧೋನಿ ತಮ್ಮ ನಾಯತ್ವ ತೊರೆದಿದ್ದರು. ಈ ವೇಳೆ ರವೀಂದ್ರ ಜಡೇಜಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದ್ರೆ ಸತತ ಸೋಲಿನಿಂದ ಬೇಸರಗೊಂಡ ರವೀಂದ್ರ ಜಡೇಜಾ, ಧೋನಿ ಅವರಿಗೆ ನಾಯಕ ಸ್ಥಾನವನ್ನು ಮರಳಿಸಿದ್ದರು. 2023ರ ಆವೃತ್ತಿಯಲ್ಲಿ ಮಹಿ ನಾಯಕತ್ವದಲ್ಲಿಯೇ ಚೆನ್ನೈ ತಂಡ 5ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು

Leave a Reply