ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಮುಗಿಸಬೇಕೆನ್ನುವ ಹುನ್ನಾರ ಮಾಡುತ್ತಿದ್ದಾರೆ : ಹೆಚ್‌ಡಿಕೆ – Vishwanews24
ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಮುಗಿಸಬೇಕೆನ್ನುವ ಹುನ್ನಾರ ಮಾಡುತ್ತಿದ್ದಾರೆ : ಹೆಚ್‌ಡಿಕೆ – Vishwanews24
ಬೆಂಗಳೂರು: “ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕರ ಬ್ರೈನ್ ವಾಶ್ ಮಾಡುತ್ತಿದ್ದು, ಜೆಡಿಎಸ್ ಅನ್ನು ಮುಗಿಸಬೇಕು ಎನ್ನುವ ಹುನ್ನಾರ ಅವರದ್ದು” ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮ್ಮ ಪಕ್ಷದ ಸದಸ್ಯರನ್ನು ಸಿದ್ದರಾಮಯ್ಯ ಅವರು ಸಂಪರ್ಕಿಸಿದ್ದು, ಬ್ರೈನ್ ವಾಶ್ ಮಾಡಿ ಹೈಜಾಕ್ ಮಾಡಲು ಯತ್ನಿಸುತ್ತಿದ್ದಾರೆ” ಎಂದು ದೂರಿದ್ದಾರೆ.
ಮೂಲ್ಕಿ : ಕಣಜದ ಹುಳು ಕಡಿದು ಗೃಹರಕ್ಷಕ ಸಿಬ್ಬಂದಿ ಬಲಿ – Vishwanews24
“ನಮ್ಮ ಬಗ್ಗೆ ಸುಖಾಸುಮ್ಮನೆ ಆರೋಪ ಮಾಡುವುದು ಬೇಡ. ಜೆಡಿಎಸ್‌ನಿಂದ ಶಕ್ತಿ ಪಡೆದುಕೊಂಡು ನಮ್ಮ ಕುರಿತು ಮಾತನಾಡುವ ಅವಶ್ಯಕತೆ ಇಲ್ಲ. ಪಕ್ಷ ಬಿಡಲು ಯಾರು ಒಂದು ಹೆಜ್ಜೆ ಇಟ್ಟಿದ್ದಾರೆ. ಯಾರು ಎರಡೂ ಕಾಲು ಆಚೆ ಇಟ್ಟಿದ್ದಾರೆ ಎನ್ನುವುದು ತಿಳಿದಿದೆ” ಎಂದಿದ್ದಾರೆ.
“ಅಭ್ಯರ್ಥಿಗಳ ಪಟ್ಟಿಯನ್ನು ನಾನು ಮೊದಲೇ ಪ್ರಕಟಿಸಲಿದ್ದು, ಜನವರಿ 2022ರಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಹೊಸಬರಿಗೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲು ಸಮಯ ಸಿಕ್ಕಂತಾಗುತ್ತದೆ” ಎಂದು ತಿಳಿಸಿದ್ದಾರೆ.
ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ವಂಚಿಸಿ, ಚಿನ್ನಾಭರಣ ಹಾಗೂ ನಗದು ಕಳವು – Vishwanews24
