ಕೈಲಾಗದವನು ಮೈಪರಚಿಕೊಂಡ:ಶಾಸಕ ಸುನಿಲ್ ಕುಮಾರ್ ಗೆ ಕಾಂಗ್ರೇಸ್ ಮುಖಂಡ ಕೃಷ್ಣಾಮೂರ್ತಿ ಆಚಾರ್ಯ ತಿರುಗೇಟು : vishwanews24

Featured, ಉಡುಪಿ

ಸುನಿಲ್ ಕುಮಾರ್ ಅವರೇ ಸಾರಿಗೆ ಸೇವೆಯಲ್ಲಿ ಉಡುಪಿಗೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ : vishwanews24

ಉಡುಪಿ ಜಿಲ್ಲೆಗೆ ಒಂದೇ ಬಂದು ಸಾರಿಗೆ ಬಸ್ಸನ್ನು ನೀಡದ ನಿಮ್ಮ ಇಂದಿನ ಹೇಳಿಕೆ ಹಾಸ್ಯಾಸ್ಪದ

ಉಡುಪಿ : ಕೈಲಾಗದವನು ಮೈ ಪರಚಿಕೊಂಡ ಎಂಬತ್ತೆ ಮಾಜಿ ಸಚಿವ ಸುನಿಲ್ ಕುಮಾರ್ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಕೃಷ್ಣ ಮೂರ್ತಿ ಆಚಾರ್ಯ ಉಚಿತ ಸಾರಿಗೆ ವಿಚಾರವಾಗಿ ತಿರುಗೇಟು ನೀಡಿದ್ದಾರೆ.

ಸಚಿವರಾಗಿ ಉಡುಪಿ ಜಿಲ್ಲೆಗೆ ಒಂದು ಸರ್ಕಾರಿ ಬಸ್ ಓಡಿಸದ ಸುನಿಲ್ ಕುಮಾರ್ ಇವತ್ತು ಖಾಸಗಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಅವರು ತಿಳಿಸಿದ್ದಾರೆ.


ಕಾಂಗ್ರೆಸ್ ಸರ್ಕಾರ ಇದ್ದ ಸಮಯದಲ್ಲಿ ಉಡುಪಿಗೆ ಗ್ರಾಮೀಣ ಭಾಗಕ್ಕೆ ನರ್ಮ್ ಬಸ್ಸುಗಳನ್ನು ನೀಡಿದ್ದು ಮತ್ತು ಅದನ್ನು ನಿಲ್ಲಿಸಿದ್ದು ಬಿಜೆಪಿ ಸರ್ಕಾರ ಎಂಬುದು ಸುನಿಲ್ ಕುಮಾರ್ ಅವರಿಗೆ ಮರೆತು ಹೋಗಿರಬಹುದು ಆದರೆ ಉಡುಪಿ ಜಿಲ್ಲೆಯ ಜನತೆ ಅದನ್ನ ಮರೆತಿಲ್ಲ ಎಂದು ಅವರು ಹೇಳಿದರು.


ಇಂಧನ ಸಚಿವರಾಗಿ ಉಡುಪಿ ಜಿಲ್ಲೆಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದ ಸುನಿಲ್ ಕುಮಾರ್ ಅವರು ಇಂದು ಖಾಸಗಿ ಬಸ್ಸಿನಲ್ಲಿ ಉಚಿತ ಪ್ರಯಾಣವನ್ನು ಕೇಳುತ್ತಿದ್ದಾರೆ ಇದೊಂದು ದೊಂಬರಾಟದ ಹೇಳಿಕೆ ಎಂದು ಅವರು ಕಟುವಾಗಿ ಟೀಕಿಸಿದರು.


ಸಚಿವರಾಗಿದ್ದ ಸಮಯದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಭಾಗಗಳಿಗೆ ಸರ್ಕಾರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದ್ದರೇ ಇವತ್ತು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಉಡುಪಿ ಜಿಲ್ಲೆಯ ಎಲ್ಲಾ ಮಹಿಳೆಯರಿಗೂ ಕೂಡ ಲಾಭವಾಗುತ್ತಿತ್ತು ಆದರೆ ಆ ಸರ್ಕಾರಿ ಬಸ್ಸಿನ ಯೋಜನೆಯನ್ನು ತಾರದೆ ಖಾಸಗಿ ಬಸ್ಸುಗಳ ಮಾಲೀಕರ ಜೊತೆ ಲಾಭಿ ಮಾಡಿಕೊಂಡಿರುವ ಪರಿಣಾಮವಾಗಿ ಇವತ್ತು ಉಡುಪಿ ಜಿಲ್ಲೆಯ ಹಲವು ಕಡೆ ಮಹಿಳೆಯರು ಈ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದರು.

ಆದರೂ ಉಡುಪಿ ಜಿಲ್ಲೆಯ ಜನತೆ ಇಂತಹ ಅವಕಾಶವಾದಿ ರಾಜಕೀಯ ವ್ಯಕ್ತಿಗಳ ಬಗ್ಗೆ ಎಚ್ಚೆತ್ತುಕೊಂಡರೆ ಉತ್ತಮ ಎಂದು ಅವರು ತಿಳಿಸಿದರು.

Leave a Reply