ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಶೇಖರ್ ಹೃದಯಾಘಾತದಿಂದ ನಿಧನ – Vishwanews24

Featured, ದಕ್ಷಿಣ ಕನ್ನಡ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಹೃದಯಾಘಾತದಿಂದ ನಿಧನ 

ಪುತ್ತೂರು : ಹೃದಯಾಘಾತದಿಂದಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ಯು.ಡಿ. ಶೇಖರ್ ರವರು ನಿಧನರಾಗಿದ್ದಾರೆ.

ಇಂದು ಬೆಳಗ್ಗೆ ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಅವರನ್ನು ಮನೆಯವರು ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ಕರೆತಂದರಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಐವರ್ನಾಡು ಗ್ರಾಮ ಪಂಚಾಯತ್ ನಲ್ಲಿ ದೀರ್ಘ ಕಾಲ ಸೇವೆ ಸಲ್ಲಿದ್ದ ಶೇಖರ್ ರವರು‌ ಬಳಿಕ ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಒ ಆಗಿ ವರ್ಗಾವಣೆ ಯಾಗಿದ್ದರು.

ಮೃತರು ಪತ್ನಿ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶೇಖರ್, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮಂಗಳೂರು: ಅಕ್ರಮ ಗೋವು ವಧೆ ಪ್ರಕರಣ..ಆರೋಪಿ ಆಸ್ತಿ ಮುಟ್ಟಗೋಲಿಗೆ ಅದೇಶ – Vishwanews24

Leave a Reply