ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯ ಮುಂಭಾಗದಲ್ಲಿ ಸ್ಥಾಪಿಸಲಾದ ಭಾರತೀಯ ವಾಯುಪಡೆಯ ನಿವೃತ್ತ ಮಿಗ್-21 ತರಬೇತಿ ಯುದ್ಧ ವಿಮಾನವನ್ನು ಮಂಗಳವಾರ ಅಧಿಕೃತವಾಗಿ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಎನ್‌ಐಟಿಕೆ ಆಡಳಿತ ಮಂಡಳಿಯ ಅಧ್ಯಕ್ಷ ಎಂ. ಎಂ. ಮುರುಗಪ್ಪನ್, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಎನ್‌ಐಟಿಕೆ ನಿರ್ದೇಶಕ ಪ್ರೊ. ಬಿ. ರವಿ ಉಪಸ್ಥಿತರಿದ್ದರು.
ವಿಮಾನದ ಕುರಿತು ಮಾಹಿತಿ ನಿವೃತ್ತ ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ ಅವರು ಮಾಹಿತಿ ನೀಡಿದರು.
ಇದನ್ನೂ ಓದಿ :
ಮಿಗ್-21 ವಿಮಾನದ ಪ್ರಮುಖ ತಾಂತ್ರಿಕ ವೈಶಿಷ್ಟ್ಯಗಳು:
ವಿನ್ಯಾಸ ಎಂಜಿನ್: ಇದು ಮಿಗ್-21ರ ಎರಡು ಆಸನಗಳ (ಟ್ಯಾಂಡಂ ಕಾಕ್ಪಿಟ್) ತರಬೇತಿ ಆವೃತ್ತಿಯಾಗಿದ್ದು, ಆರ್-13 ಟರ್ಬೋಜೆಟ್ ಎಂಜಿನ್ ಹೊಂದಿದೆ.
ಸ್ಥಿರತೆ ಸಾಮರ್ಥ್ಯ: ಡೆಲ್ಟಾ ಆಕಾರದ ರೆಕ್ಕೆಗಳು ವಿಮಾನಕ್ಕೆ ಚುರುಕುತನ ಹಾಗೂ ಸ್ಥಿರತೆಯನ್ನು ನೀಡುತ್ತವೆ. ಇದು ಹೊರಾಂಗಣ ಗನ್ ಪಾಡ್ ಹಾಗೂ ರೆಕ್ಕೆಗಳ ಕೆಳಭಾಗದಲ್ಲಿ ಬಾಂಬ್‌ಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿತ್ತು.
ಸೇವಾ ಇತಿಹಾಸ: ಭಾರತೀಯ ವಾಯುಪಡೆ ಬಳಸಿದ 100ಕ್ಕೂ ಹೆಚ್ಚು ತರಬೇತಿ ವಿಮಾನಗಳಲ್ಲಿ ಒಂದಾಗಿದ್ದ ಇದು, ಸೆಪ್ಟೆಂಬರ್ 2025ರವರೆಗೆ ಸಕ್ರಿಯ ಸೇವೆಯಲ್ಲಿತ್ತು.
ಇದನ್ನೂ ಓದಿ :
ಮೂರು ಯುದ್ಧಗಳಲ್ಲಿ ಪ್ರಮುಖ ಪಾತ್ರ
ಮಿಗ್-21 ಒಂದು ಸೂಪರ್ಸಾನಿಕ್ (ಅಧಿಧ್ವನಿಗತಿಯ) ಯುದ್ಧ ವಿಮಾನವಾಗಿದ್ದು, 1963ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತ್ತು. 1965, 1971 ಹಾಗೂ 1999ರ ಯುದ್ಧಗಳಲ್ಲಿ ಇದು ಪ್ರಮುಖ ಪಾತ್ರ ವಹಿಸಿತ್ತು.
‘‘ಡಿಸೆಂಬರ್ 2023ರಲ್ಲಿ ಮಾಡಿದ ಮನವಿಯ ಮೇರೆಗೆ ವಾಯುಪಡೆಯು ಜನವರಿ 2026ರಲ್ಲಿ ವಿಮಾನವನ್ನು ಹಂಚಿಕೆ ಮಾಡಿ, ಜುಲೈ 2026ರಲ್ಲಿ ಬಿಡಿಭಾಗಗಳನ್ನು ತಲುಪಿಸಿತು. ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಮರುಜೋಡಣೆ ನಡೆದು ಇಂದು ಅನಾವರಣಗೊಂಡಿದೆ.
-ಡಾ. ಶ್ರೀನಿವಾಸ ರಾವ್ ಕೋಲಾ ಎನ್‌ಐಟಿಕೆಯ ಅಕಾಡೆಮಿ ಫಾರ್ ಪ್ರಭಾರ ಪ್ರಾಧ್ಯಾಪಕರು ಡಿಫೆನ್ಸ್, ಅಡ್ವೆಂಚರ್ ಅಂಡ್ ಲೀಡರ್ಶಿಪ್ (ನಡಾಲ್)
ಇದನ್ನೂ ಓದಿ :
‘‘ದಕ್ಷಿಣ ಕನ್ನಡದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಶಸ್ತ್ರ ಪಡೆಗಳಿಗೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ. ಈ ಮಿಗ್-21 ವಿಮಾನವು ವಿದ್ಯಾರ್ಥಿಗಳಿಗೆ ಕೇವಲ ವೀಕ್ಷಣೆಯ ಪ್ರೇರಣೆಯಷ್ಟೇ ಅಲ್ಲದೆ, ಸೇವಾ ಮನೋಭಾವ, ಶಿಸ್ತು ಹಾಗೂ ಶ್ರೇಷ್ಠತೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಲಿದೆ.
– ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ
‘‘ಎನ್‌ಐಟಿಕೆ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮಿಗ್-21 ವಿಮಾನದ ಸ್ಥಾಪನೆಯು ಮುಂದಿನ ಪೀಳಿಗೆಗೆ ಪ್ರೇರಣೆಯಾಗುವುದರ ಜೊತೆಗೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಶಿಸ್ತು ಮತ್ತು ಉದ್ದೇಶದ ಮಹತ್ವವನ್ನು ನೆನಪಿಸುವ ಸಂಕೇತವಾಗಲಿದೆ.
– ಎಂ. ಎಂ. ಮುರುಗಪ್ಪನ್, ಅಧ್ಯಕ್ಷರು, ಆಡಳಿತ ಮಂಡಳಿ, ಎನ್‌ಐಟಿಕೆ
ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…
ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…
ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ನೇಮಕ ನವದೆಹಲಿ: ಭಾರತೀಯ ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ ಏರ್…
ಕಾರ್ಕಳ : ಮನೆಯ ಗೋಡೌನ್‌ನಿಂದ 95 ಸಾವಿರ ರೂ. ಮೌಲ್ಯದ ಅಡಿಕೆ ಕಳವು ಕಾರ್ಕಳ: ತಾಲೂಕಿನ ಮಿಯ್ಯಾರು ಗ್ರಾಮದ ಮನೆಯೊಂದರ…
ಮೋದಿ ಸರ್ಕಾರದಿಂದ ಸರ್ವಾಂಗೀಣ ಅಭಿವೃದ್ಧಿಗೆ ಹೊಸ ದಿಕ್ಕು: ಬಿ.ವೈ .ವಿಜಯೇಂದ್ರ ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ…
ಅ.11 ರಿಂದ 20ರವರೆಗೆ ಮಂಗಳೂರು-ಉಡುಪಿ ಕೆಎಸ್‌ಆರ್‌ಟಿಸಿಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್ ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ…