ಸುರತ್ಕಲ್ : NITK ಬೀಚ್‌ನಲ್ಲಿ ಯುವತಿಯ ಅತ್ಯಾಚಾರ – ವಿಡೀಯೋ ತೋರಿಸಿ ವಿದ್ಯಾರ್ಥಿನಿಗೆ ಕಿರುಕುಳ ; ಆರೋಪಿಯ ಬಂಧನ – Vishwanews24 

Featured, ದಕ್ಷಿಣ ಕನ್ನಡ

ಸುರತ್ಕಲ್ : NITK ಬೀಚ್‌ನಲ್ಲಿ ಯುವತಿಯ ಅತ್ಯಾಚಾರ – ಅತ್ಯಾಚಾರವೆಸಗಿದ ವಿಡೀಯೋ ತೋರಿಸಿ ವಿದ್ಯಾರ್ಥಿನಿಗೆ  ಕಿರುಕುಳ ; ಆರೋಪಿ ಮುನಾಝ್ ಅಹ್ಮದ್ ಬಂಧನ  

ಮಂಗಳೂರು: ಬೀಚ್‌ನಲ್ಲಿ ಸಹಪಾಠಿಯೊಂದಿಗಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ಮೀನು ಲಾರಿ ಚಾಲಕ ಮುನಾಝ್ ಅಹ್ಮದ್ (30) ಬಂಧಿತ ಆರೋಪಿ.

ಜುಲೈ 27ರಂದು ನಗರದ ಎನ್‌ಐಟಿಕೆ ಬೀಚ್‌ನಲ್ಲಿ ತನ್ನ ಸ್ನೇಹಿತನ ಜತೆಯಲ್ಲಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆರೋಪಿ ಸಹಪಾಠಿಯನ್ನು ಬೆದರಿಸಿ ಓಡಿಸಿ ಅತ್ಯಾಚಾರ ಎಸಗಿರುವುದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿನಿ ಜತೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಅದನ್ನು ವೀಡಿಯೋ ಕೂಡಾ ಮಾಡಿದ್ದು, ಆ ಮೂಲಕ ಬೆದರಿಕೆ ಒಡ್ಡಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿರುವುದಾಗಿ ಪೋಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಸುರತ್ಕಲ್ : ಫಾಝಿಲ್ ಹತ್ಯೆಯ ಸಮಯದಲ್ಲಿ ಮುಖ್ಯಮಂತ್ರಿ ಮಂಗಳೂರಿನಲ್ಲಿದ್ದರೂ ಪ್ರತಿಕ್ರಿಯೆ ನೀಡಿಲ್ಲ : ಸಿಎಂ ವಿರುದ್ಧ ಫಾಝಿಲ್ ಕುಟುಂಬ ಅಸಮಾಧಾನ – Vishwanews24 ಅಸಮಾಧಾನ

Leave a Reply