ಸುಳ್ಯ: ಕಾಂತಾರ ಸಿನಿಮಾಕ್ಕೆ ವೀಕ್ಷಿಸಲು ಬಂದಿದ್ದ ಮುಸ್ಲಿಂ ಜೋಡಿಗೆ ತಂಡದಿಂದ ಹಲ್ಲೆ: ಐವರ ವಿರುದ್ದ ಪ್ರಕರಣ ದಾಖಲು – Vishwanews24
ಸುಳ್ಯ: ಕಾಂತಾರ ಸಿನಿಮಾಕ್ಕೆ ವೀಕ್ಷಿಸಲು ಬಂದಿದ್ದ ಮುಸ್ಲಿಂ ಜೋಡಿಗೆ ತಂಡದಿಂದ ಹಲ್ಲೆ: ಐವರ ವಿರುದ್ದ ಪ್ರಕರಣ ದಾಖಲು
ಸುಳ್ಯ: ಇಲ್ಲಿನ ಚಿತ್ರಮಂದಿರಕ್ಕೆ ಚಿತ್ರ ವೀಕ್ಷಿಸಲು ಬಂದಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿ , ಜೀವ ಬೆದರಿಕೆ ಒಡ್ಡಿದ ಆರೋಪದ ಮೇಲೆ ದೂರು ದಾಖಲಾಗಿದೆ.
ಆರೋಪಿಗಳನ್ನು ಅಬ್ದುಲ್ ಹಮೀದ್, ಅಶ್ರಫ್ , ಸಾಧಿಕ್, ಜಾಬೀರ್ ಜಟ್ಟಿಪಳ್ಳ, ಸಿದ್ದಿಕ್ ಬೋರುಗುಡ್ಡೆ ಎಂದು ಗುರುತಿಸಲಾಗಿದ್ದು, ಇವರ ವಿರುದ್ದ ಪ್ರಕರಣ ದಾಖಲಾಗಿದೆ.
ಸುಳ್ಯ : ಕಾಂತಾರ ಸಿನಿಮಾ ವೀಕ್ಷಿಸಲು ಬಂದ ಮುಸ್ಲಿಂ ಜೋಡಿಗೆ ಮುಸ್ಲಿಂ ಯುವಕ ರಿಂದ ಹಲ್ಲೆ !- Vishwanews24
ಬಿಕಾಂ ಓದುತ್ತಿರುವ ಹುಡುಗ ಮತ್ತು 18 ವರ್ಷ ಹರೆಯದ ಯುವತಿ ಒಂದೇ ಕೋಮಿನವರಾಗಿದ್ದು , ಕಾಂತಾರ ಚಿತ್ರ ವೀಕ್ಷಿಸಲು ಸುಳ್ಯದ ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಪಾರ್ಕಿಂಗ್ ಸ್ಥಳದಲ್ಲಿ ಮಾತನಾಡುತ್ತಿದ್ದ ವಿದ್ಯಾರ್ಥಿಗಳನ್ನು ಸುತ್ತುವರಿದ ಐವರ ತಂಡವು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದೆ.
ಮಂಗಳೂರು: ಬುರ್ಕಾ ಧರಿಸಿ ಹಿಂದಿ ಐಟಂ ಸಾಂಗ್ಗೆ ಸ್ಟೆಪ್ ; ನಾಲ್ವರು ಮುಸ್ಲಿಂ ವಿದ್ಯಾರ್ಥಿಗಳ ಅಮಾನತು – Vishwanews24
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಟ್ಲ : ಛದ್ಮವೇಶದ ಮೂಲಕ ದೈವಾರಾಧನೆ ಪ್ರದರ್ಶನ ; ತೀವ್ರ ಆಕ್ರೋಶ – Vishwanews24
