ಸುಳ್ಯ :  ಲೋ ಬಿ.ಪಿ  – ನಿಯಂತ್ರಣ ತಪ್ಪಿ ಆಟೋ ಪಲ್ಟಿ ; ಚಾಲಕ ಸಾವು – Vishwanews24

Featured, ದಕ್ಷಿಣ ಕನ್ನಡ

ಸುಳ್ಯ :  ಲೋ ಬಿ.ಪಿ  – ನಿಯಂತ್ರಣ ತಪ್ಪಿ ಆಟೋ ಪಲ್ಟಿ ; ಚಾಲಕ ಸಾವು

ಸುಳ್ಯ, : ಸುಬ್ರಹ್ಮಣ್ಯದ ಇಂಜಾಡಿ ಬಳಿ ರಿಕ್ಷಾ ಪಲ್ಟಿಯಾಗಿ ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವಾಗ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಎಂದು ಗುರುತಿಸಲಾಗಿದೆ.

ವಿವೇಕಾನಂದ ಅವರು ಮಾ.3 ರಾತ್ರಿ ಗಂಟೆ 9ರ ಆಸುಪಾಸು ಇಂಜಾಡಿ ಬಳಿ ಅಟೋದಲ್ಲಿ ಹೋಗುತ್ತಿರುವಾಗ ಲೋ ಬಿ.ಪಿ ಆಗಿ ರಿಕ್ಷಾ ರಸ್ತೆ ಬದಿ ಚಲಿಸಿ ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡರೆನ್ನಲಾಗಿದ್ದು, ಆಸ್ಪತ್ರೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಬಾಂಬ್‌ ಇಟ್ಟವರು ದೇಶ ದ್ರೋಹಿಗಳು , ಮನುಷ್ಯತ್ವ, ಕರುಣೆ ಇಲ್ಲದವರನ್ನು ನಾವು ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ : ಸ್ಪೀಕರ್ ಯುಟಿ ಖಾದರ್ – Vishwanews24

Leave a Reply