ಸುಳ್ಯ: ಹೊಳೆ ನೀರಿಗೆ ಬಿದ್ದು ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ  ದಾರುಣ ಸಾವು – Vishwanews24

Featured, ದಕ್ಷಿಣ ಕನ್ನಡ

ಸುಳ್ಯ: ಹೊಳೆ ನೀರಿಗೆ ಬಿದ್ದು ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ  ದಾರುಣ ಸಾವು

ಸುಳ್ಯ:ಮೇನಾಲ ಹೊಳೆ ನೀರಿಗೆ ಬಿದ್ದು ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ.

ಮೃತರನ್ನು ಮೇನಾಲ ನಿವಾಸಿ ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ನವೀನ್ ರೈ ಎಂದು ಗುರುತಿಸಲಾಗಿದೆ.

ತುದಿಯಡ್ಕ ಬಳಿ ಪಯಸ್ವಿನಿ ನದಿಗೆ ತನ್ನ ಪಂಪ್ ಸೆಟ್ ನ ಪುಟ್ ವಾಲ್ ರಿಪೇರಿಗೆಂದು ಹೊಳೆಗೆ ಇಳಿದಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಮೇಲೇತ್ತಲಾಗಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ವೇಳೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿ ಅ ಭಾಗದ ಜನರ ಪ್ರೀತಿ ಗಳಿಸಿದ್ದರು. ರಾಜಕೀಯದ ಜತೆಗೆ ಧಾರ್ಮಿಕ, ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಮೇನಾಲ ಭಾಗದಲ್ಲಿ ಬಿಜೆಪಿಯ ಪ್ರಭಾವಿ ನಾಯಕರಾಗಿದ್ದ ನವೀನ್ ರೈ ಅಕಾಲಿಕ ಮರಣವನ್ನಪ್ಪಿದ್ದಾರೆ.

ಎಚ್ ಡಿ ದೇವೇಗೌಡರ 91ರ ಹುಟ್ಟುಹಬ್ಬ : ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಸರಳ ರೀತಿಯಲ್ಲಿ ಆಚರಣೆ – Vishwanews24

Leave a Reply