ಸೆ.19ರಂದು ಯುಎಇನಲ್ಲಿ ಐಪಿಎಲ್ ಆರಂಭ, ಅ.15ರಂದು ಫೈನಲ್ -Vishwanews24

Featured, ರಾಷ್ಟ್ರ ನ್ಯೂಸ್

ಸೆ.19ರಂದು ಯುಎಇನಲ್ಲಿ ಐಪಿಎಲ್ ಆರಂಭ, ಅ.15ರಂದು ಫೈನಲ್ -Vishwanews24

ಮುಂಬೈ: ಕೋವಿಡ್ ಕಾರಣದಿಂದ ಸ್ಥಗಿತವಾಗಿರುವ ಐಪಿಎಲ್ ಕೂಟದ ಮುಂದುವರಿದ ಭಾಗ ಯುಎಇ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಈಗಾಗಲೇ ಖಚಿತ ಪಡಿಸಿದೆ. ಸೆ.19ರಂದು ಮೊದಲ ಪಂದ್ಯ ನಡೆಯಲಿದ್ದು, ಫೈನಲ್ ಪಂದ್ಯವು ಅಕ್ಟೋಬರ್ 15ರಂದು ನಡೆಯಲಿದೆ ಎಂದು ವರದಿಯಾಗಿದೆ.

ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಎಎನ್ ಐ ಗೆ ಮಾಹಿತಿ ನೀಡಿದ್ದಾರೆ. ಬಿಸಿಸಿಐ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮಾತುಕತೆ ಫಲಪ್ರದವಾಗಿದೆ. ಐಪಿಎಲ್ ನ ಬಾಕಿ ಉಳಿದಿರುವ ಪಂದ್ಯಗಳು ಯುಎಇ ನಲ್ಲಿ ಯಶಸ್ವಿಯಾಗಿ ನಡೆಯುವ ಬಗ್ಗೆ ಬಿಸಿಸಿಐ ವಿಶ್ವಾಸ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಶಾರ್ಜಾ ಅಬುಧಾಬಿ, ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿದೆ. 25 ದಿನಗಳ ಕಾಲ ನಡೆಯಲಿರುವ ಕೂಟದ ಫೈನಲ್ ಪಂದ್ಯ ಅ.25ರಂದು ನಡೆಯಲಿದೆ ಎನ್ನಲಾಗಿದೆ

ವಿದೇಶಿ ಆಟಗಾರರ ಲಭ್ಯತೆಯ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಬಿಸಿಸಿಐ ಮಾತುಕತೆ ಜಾರಿಯಲ್ಲಿರಿಸಿದೆ. ಬಹುತೇಕ ಆಟಗಾರರು ಲಭ್ಯವಾಗಲಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಿದೆ. ಈ ಮುಂದುವರಿದ ಕೂಟ ಯಶಸ್ವಿಯಾಗುವ ಬಗ್ಗೆ ಬಿಸಿಸಿಐ ವಿಶ್ವಾಸದಿಂದ ಇದೆ ಎಂದು ಹೇಳಿದ್ದಾರೆ.