ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್ -vishwanews24
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ
ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ ರಚಿಸಿರುವ ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಬಿ. ಸಿ. ರೋಡ್‌ನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್‌ಕುಮಾರ್‌ರೆಡ್ಡಿ ಒಳ್ಳೆಯವರು. ಆದರೆ ಉಳಿದವರ ಬಗ್ಗೆ ನಮಗೆ ಸಂಶಯ ಇದೆ. ಈ ಪ್ರಕರಣ 14 ವರ್ಷಗಳಿಂದ ಹಾಗೇ ಇದ್ದು, ನ್ಯಾಯ ಕೊಡಲಿ ಎಂದರು.
ಕೇವಲ ಫೋನ್ ಮಾಡಿದ ಕಾರಣಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದು ಯಾವ ನ್ಯಾಯ? ಎಂದು ಅವರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ನಾನು ಜೈಲಿಗೆ ಹೋಗಿ ಆಗಿದೆ. ನನ್ನ ಹೆಂಡತಿಯನ್ನೂ ಜೈಲಿಗೆ ಹಾಕಿದ್ದಾರೆ. ಇನ್ನು ಏನಿದ್ದರೂ ಗಲ್ಲಿಗೆ ಹಾಕಬೇಕು. ಅದೂ ಆಗಲಿ ಎಂದರು.
