ಸ್ಪಾ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ; 7 ವಿದೇಶಿ ಮಹಿಳೆಯರ ರಕ್ಷಣೆ – Vishwanews24

Featured, ರಾಜ್ಯ ನ್ಯೂಸ್

ಸ್ಪಾ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ; 7 ವಿದೇಶಿ ಮಹಿಳೆಯರ ರಕ್ಷಣೆ

ಬೆಂಗಳೂರು : ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಬೆಂಗಳೂರಿನ ರೋರಾ ಲಕ್ಷುರಿ ಥಾಯ್‌’ ಸ್ಪಾ ಮೇಲೆ ಯಲಹಂಕ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಸಂದರ್ಭ ಅಲ್ಲಿದ್ದ ಏಳು ಮಂದಿ ವಿದೇಶಿ ಮಹಿಳೆಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಯಲಹಂಕ ಉಪನಗರದಲ್ಲಿರುವ ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ದಾಳಿ ಮಾಡಿ ಮಹಿಳೆಯರನ್ನು ರಕ್ಷಿಸಲಾಗಿದೆ. ಸ್ಪಾ ಮೆನೇಜರ್ ಕಿಶೋರ್‌ನನ್ನು ಬಂಧಿಸಲಾಗಿದೆ. ಸ್ಪಾ ಮಾಲೀಕ ಸೇರಿ ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಪೊಲೀಸರು ಬಲೆ ಬೀಸಿದ್ದಾರೆ.

ಥಾಯ್ಲೆಂಡ್‌ನಿಂದ ಮಹಿಳೆಯರನ್ನು ಪ್ರವಾಸ ವೀಸಾದಡಿ ನಗರಕ್ಕೆ ಕರೆಸುತ್ತಿದ್ದ ಆರೋಪಿಗಳು, ಸ್ಪಾನಲ್ಲಿ ಕೆಲಸಕ್ಕೆ ಇರಿಸುತ್ತಿದ್ದರು. ಸ್ಪಾ ಹೆಸರಿನಲ್ಲಿ ಮಧ್ಯವರ್ತಿಗಳ ಮೂಲಕ ಗ್ರಾಹಕರನ್ನು ಆಹ್ವಾನಿಸಿ ವೇಶ್ಯಾವಾಟಿಕೆಯ ದಂಧೆ ನಡೆಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏಕವಚನದಲ್ಲಿ ವಾಗ್ದಾಳಿ – ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ ಪ್ರತಾಪ್ ಸಿಂಹ – Vishwanews24

Leave a Reply