ಸ್ಮಶಾನ ಕಾರ್ಮಿಕರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ : ಶೀಘ್ರವೇ ಖಾಯಂ ನೇಮಕಾತಿಗೆ ಆದೇಶ – Vishwanews24
ಸ್ಮಶಾನ ಕಾರ್ಮಿಕರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ : ಶೀಘ್ರವೇ ಖಾಯಂ ನೇಮಕಾತಿಗೆ ಆದೇಶ
ಬೆಂಗಳೂರು : ಸ್ಮಶಾನ ಕಾರ್ಮಿಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಸ್ಮಶಾನ ಕಾರ್ಮಿಕರ ಖಾಯಂ ನೇಮಕಾತಿ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ಬಳಿಯ ಸರ್ಕಾರಿ ನಿವಾಸದಲ್ಲಿ ಇಂದು ಸ್ಮಶಾನ ಕಾರ್ಮಿಕರ ಜೊತೆಗೆ ಉಪಹಾರ ಸೇವಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಸ್ಮಶಾನ ಕಾರ್ಮಿಕರನ್ನು ಇನ್ಮುಂದೆ ಸತ್ಯಹರಿಶ್ಚಂದ್ರ ಬಳಗ ಎಂದು ಕರೆಯಬೇಕು ಎಂದು ಸೂಚನೆ ನೀಡಿದ್ದಾರೆ.

ನಾನು ಒಂದು ದಿನ ಕಾರ್ಮಿಕರ ಸಮಸ್ಯೆ ಕೇಳಿದ್ದೇನೆ. ಸಮಸ್ಯೆ ಕೇಳಿ ಸೌಲಭ್ಯ ಕೊಡುವ ನಿರ್ಣಯ ಮಾಡಿದ್ದೇನೆ. ಬೆಂಗಳೂರಿನಲ್ಲಿ 117 ಸ್ಮಶಾನ ಕಾರ್ಮಿಕರನ್ನು ಖಾಯಂ ಮಾಡಿದ್ದೇನೆ. ಉಳಿದ 100 ಜನರಿಗೆ ಖಾಯಂ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಹನಿಮೂನ್ ವೇಳೆ ಗಂಡನಿಗೆ ಮತ್ತು ಬರುವ ಔಷಧಿ ನೀಡಿ ಪ್ರಿಯಕರನ ಜೊತೆ ಹೆಂಡತಿ ಎಸ್ಕೇಪ್ – Vishwanews24
ಇಷ್ಟು ವರ್ಷ ಸ್ಮಶಾನ ಕಾರ್ಮಿಕರ ಸಮಸ್ಯೆಗಳನ್ನು ಯಾರೂ ಕೇಳಲಿಲ್ಲ. ರಾಜ್ಯ ಸರ್ಕಾರವಾಗಲಿ, ಅಧಿಕಾರಿಗಳೇ ಆಗಲಿ ತಿರುಗಿ ನೋಡಲಿಲ್ಲ. ಇದು ಬಡವರ ಪರ ಕಳಕಳಿ ಇರುವಂತಹ ಸರ್ಕಾರ, ಕಾರ್ಮಿಕರು ಕೊಟ್ಟಿರುವಂತ ಸತ್ಯಹರಿಶ್ಚಂದ್ರ ಪ್ರತಿಮೆಯನ್ನು ನಾನು ದೇವರ ಮನೆಯಲ್ಲೇ ಇಡುತ್ತೇನೆ ಎಂದರು.
