ಸ್ಯಾಂಡಲ್​ವುಡ್​ ಯುವ ನಟ ಧನುಷ್ ನಿಧನ – Vishwanews24

Featured, ರಾಜ್ಯ ನ್ಯೂಸ್

ಸ್ಯಾಂಡಲ್​ವುಡ್​ ಯುವ ನಟ ಧನುಷ್ ನಿಧನ 

ಸಂಪಿಗೆ ಹಳ್ಳಿ, ಕೊಟ್ಲಲ್ಲಪ್ಪೋ ಕೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಧನುಷ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದ ಅವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಗದೇ, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಬಾಗಲಕೋಟೆಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದ ಶ್ರೀಮುತ್ತುರಾಜ್ ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂದು ಬದಲಾಯಿಸಿಕೊಂಡಿದ್ದರು. ಪ್ಯಾರ್ ಕಾ ಗೋಲ್ಗುಂಬಜ, ಸ್ನೇಹಿತ, ಶಿವರಾಜ್ ಕುಮಾರ್ ನಟನೆಯ ಲೀಡರ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ನಟಿಸಿದ್ದರು. ಪ್ರಮುಖ ಪಾತ್ರಗಳಲ್ಲಷ್ಟೇ ಅಲ್ಲ, ಇತರ ಸ್ಟಾರ್ ನಟರ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.

ವಿಟ್ಲ: ಆಕಸ್ಮಿಕವಾಗಿ ಬೆಂಕಿ‌ ತಗುಲಿ ಸಂಪೂರ್ಣ ಸುಟ್ಟು ಹೋದ ಮನೆ :: ಮಹಿಳೆ ಅಪಾಯದಿಂದ ಪಾರು – Vishwanews24

ಅಗಲಿದ ಧನುಷ್ ಅವರ ಮೃತದೇಹವನ್ನು ಅವರ ಊರಿಗೆ ಕೊಂಡೊಯ್ಯಲಾಗಿದ್ದು, ಇಂದು ಹುಟ್ಟೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅಗಲಿದ ನಟನಿಗೆ ಸಿನಿಮಾ ತಂಡಗಳು ಹಾಗೂ ಅವರ ಸ್ನೇಹಿತರು ಸಂತಾಪ ವ್ಯಕ್ತ ಪಡಿಸಿದ್ದಾರೆ.

Join our Whatsapp group by clicking the below link 👇👇

https://chat.whatsapp.com/KfUmhXQKZb114i4QHNvqEK

Leave a Reply