ಸ್ವಾಮಿ ವಿವೇಕಾನಂದರ 157ನೇ ಜಯಂತಿ ; ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ -Vishwanews24
ಸ್ವಾಮಿ ವಿವೇಕಾನಂದರ 157ನೇ ಜಯಂತಿ ; ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ –Vishwanews24
ನವದೆಹಲಿ:ಇಂದು ದೇಶಾದ್ಯಂತ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿ ದೇಶದ ಗಣ್ಯರು ವಿವೇಕಾನಂದರನ್ನು ಸ್ಮರಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕುರಿತು ಟ್ವೀಟ್ ಮಾಡಿ, ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನನ್ನ ವಿದೇಯ ನಮನಗಳು. ಇಡೀ ಮನುಕುಲಕ್ಕೆ ಅವರೊಬ್ಬ ಸ್ಪೂರ್ತಿ. ವಿಶೇಷವಾಗಿ ಯುವಜನತೆಗೆ ಅವರು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಿದರು ಮತ್ತು ಅದನ್ನು ಜಾಗತಿಕ ರಂಗದಲ್ಲಿ ಕೇಂದ್ರೀಕರಿಸಿದರು.ಅವರ ಬೋಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಹೇಳಿದ್ದಾರೆ.
My humble tributes to Swami Vivekananda on his birth anniversary. An inspiration for entire humanity, for the youth in particular, he revitalized India's spiritual heritage and brought it centrestage at the global arena. His teachings continue to inspire all of us.
— President of India (@rashtrapatibhvn) January 12, 2021
ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಮೋ ಆಪ್ ನಲ್ಲಿ ವಿವೇಕಾನಂದರ ಆಲೋಚನೆಗಳು ಮತ್ತು ವೈಯಕ್ತಿಕ ಸಂದೇಶಗಳನ್ನು ನೀವು ಹಂಚಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಅದ್ವಿತೀಯ ಆಲೋಚನೆಗಳನ್ನು ಇಂದಿನ ಜನಾಂಗದವರಿಗೆ ಪಸರಿಸುವ ಕೆಲಸ ಮಾಡೋಣ ಎಂದು ಆಪ್ ನ ಲಿಂಕ್ ನ್ನು ಶೇರ್ ಮಾಡಿದ್ದಾರೆ.
स्वामी विवेकानंद को उनकी जयंती पर कोटि-कोटि नमन।
This Vivekananda Jayanti, there’s a creative effort on the NaMo App that lets you share his thoughts and a personalised message.
Let us spread Swami Vivekananda’s dynamic thoughts and ideals far and wide! https://t.co/lMjQwqH0M2 pic.twitter.com/Nh4ZVtn3k7— Narendra Modi (@narendramodi) January 12, 2021
