ಸ್ವಾಮಿ ವಿವೇಕಾನಂದರ 157ನೇ ಜಯಂತಿ ; ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ -Vishwanews24

Featured, ರಾಷ್ಟ್ರ ನ್ಯೂಸ್

ಸ್ವಾಮಿ ವಿವೇಕಾನಂದರ 157ನೇ ಜಯಂತಿ ; ಸ್ಮರಿಸಿದ ರಾಷ್ಟ್ರಪತಿ, ಪ್ರಧಾನಿ –Vishwanews24

ನವದೆಹಲಿ:ಇಂದು ದೇಶಾದ್ಯಂತ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿ ದೇಶದ ಗಣ್ಯರು ವಿವೇಕಾನಂದರನ್ನು ಸ್ಮರಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಈ ಕುರಿತು ಟ್ವೀಟ್ ಮಾಡಿ, ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನನ್ನ ವಿದೇಯ ನಮನಗಳು. ಇಡೀ ಮನುಕುಲಕ್ಕೆ ಅವರೊಬ್ಬ ಸ್ಪೂರ್ತಿ. ವಿಶೇಷವಾಗಿ ಯುವಜನತೆಗೆ ಅವರು ಭಾರತದ ಆಧ್ಯಾತ್ಮಿಕ ಪರಂಪರೆಯನ್ನು ಪುನರುಜ್ಜೀವನಗೊಳಿಸಿದರು ಮತ್ತು ಅದನ್ನು ಜಾಗತಿಕ ರಂಗದಲ್ಲಿ ಕೇಂದ್ರೀಕರಿಸಿದರು.ಅವರ ಬೋಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಮೋ ಆಪ್ ನಲ್ಲಿ ವಿವೇಕಾನಂದರ ಆಲೋಚನೆಗಳು ಮತ್ತು ವೈಯಕ್ತಿಕ ಸಂದೇಶಗಳನ್ನು ನೀವು ಹಂಚಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಅದ್ವಿತೀಯ ಆಲೋಚನೆಗಳನ್ನು ಇಂದಿನ ಜನಾಂಗದವರಿಗೆ ಪಸರಿಸುವ ಕೆಲಸ ಮಾಡೋಣ ಎಂದು ಆಪ್ ನ ಲಿಂಕ್ ನ್ನು ಶೇರ್ ಮಾಡಿದ್ದಾರೆ.

http://ಉಡುಪಿ : ಯಕ್ಷನಿಧಿ ಡೈರಿ ಬಿಡುಗಡೆ -Vishwanews24