ಹಣ ಹೆಂಡಕ್ಕೆ ಬಲಿಯಾಗದೇ,ಕಾಂಗ್ರೆಸ್ ಬೆಂಬಲಿಸಿ : ವಿನಯ್ ಕುಮಾರ್ ಸೊರಕೆ
ಕಾಪು : ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರದ ಕಡೆಯ ದಿನವಾದ ಇಂದು ಕಾಪು ಪೇಟೆಯಲ್ಲಿ ವಿನಯ್ ಕುಮಾರ್ ಸೊರಕೆ ಮತಯಾಚನೆ ನಡೆಸಿದರು.
ತದನಂತ ಮಾಧ್ಯಮದ ಜತೆ ಮಾತನಾಡುತ್ತಾ ” ಬಿಜೆಪಿ ಸುಳ್ಳು ಹೇಳಿ ಅಪಪ್ರಚಾರ ಮಾಡುತ್ತಿದೆ,ಧರ್ಮ ಜಾತಿಯನ್ನು ವಿಂಗಡಿಸುತ್ತ ಮತ ಯಾಚನೇ ಮಾಡುತ್ತಿದ್ದಾರೆ ,ಜನರಿಗೆ ಗೊತ್ತಿದೆ ಅಭಿವೃದ್ಧಿ ಗೆ ಬೆಂಬಲನೀಡಬೇಕೆಂದು ವಿನಂತಿಸಿ , ಬಿಜೆಪಿ ಯ ಹಣ ಹೆಂಡಕ್ಕೆ ಬಲಿಯಾಗಬಾರದೆಂದು ಕೇಳಿಕೊಂಡರು.
ಮತಯಾಚನೆ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಕಾಪು ದಿವಾಕರ್ ಶೆಟ್ಟಿ, ಹರೀಶ್ ನಾಯಕ್,ಸೇರಿದಂತೆ ಮೊದಲಾದವರು ಉಪಸ್ಥಿತಿತರಿದ್ದರು.

