ಹಾಸನಾಂಬ ಭಕ್ತರಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ – vishwanews24

Featured, ರಾಜ್ಯ ನ್ಯೂಸ್

ಹಾಸನಾಂಬ ದರ್ಶನಕ್ಕೆ KSRTC ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ ;ಟಿಕೆಟ್‌ ದರ, ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಐತಿಹಾಸಿಕ ಹಾಸನಾಂಬ ದೇವಸ್ಥಾನ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿ ವಿಶೇಷ ಟೂರ್ ಪ್ಯಾಕೇಜ್ ಪರಿಚಯಿಸಿದೆ. ಅಕ್ಟೋಬರ್ 30 ರಿಂದ ಈ ಪ್ಯಾಕೇಜ್ ಆರಂಭವಾಗಲಿದ್ದು, ಬಸ್‌ಗಳಲ್ಲಿ ಅರಾಮಾಗಿ ಹೋಗಿ ದೇವಿ ದರ್ಶನ ಪಡೆದು ಹಿಂದಿರುಗಬಹುದು.

ಪ್ರಮುಖವಾಗಿ ಬೆಂಗಳೂರು ಮತ್ತು ಮೈಸೂರಿನಿಂದ ‘ಐರಾವತ (ವೋಲ್ವೋ)’ ಹಾಗೂ ನೂತನ ‘ಅಶ್ವಮೇಧ’ (ವೇಗಧೂತ) ಬಸ್‌ಗಳ ಈ ಪ್ರವಾಸ ಇರಲಿದೆ. ಈ ಪ್ಯಾಕೇಜ್‌ನಲ್ಲಿ ದೇವಿಯ 1,000 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್‌ ಕೂಡ ಒಳಗೊಂಡಿರುವುದು ವಿಶೇಷವಾಗಿದೆ.

ಮಧ್ಯಪ್ರದೇಶ: ಟೈರ್ ಸ್ಫೋಟಗೊಂಡು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರಿಗೆ ಬೆಂಕಿ; ನಾಲ್ವರು ಯುವಕರು ಸಜೀವ ದಹನ – vishwanews24

ಬೆಂಗಳೂರಿನಿಂದ ಹಾಸನಾಂಬ ಟೂರ್‌ ಪ್ಯಾಕೇಜ್ ವಿವರ
ಬಸ್ ವಿಧ ಮಾರ್ಗ, ಸ್ಥಳಗಳು ಹೊರಡುವ ಸಮಯ ಮತ್ತು ಸ್ಥಳ ಹಿಂದಿರುಗುವ ಸಮಯ ಒಟ್ಟು ದೂರ ಟಿಕೆಟ್ ದರ (ಪ್ರತಿ ವ್ಯಕ್ತಿಗೆ)

ಐರಾವತ (ವೋಲ್ವೋ) :ಬೆಂಗಳೂರು – ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ – ದೇವಿಗೆರೆ ಕಲ್ಯಾಣಿ – ಬೆಂಗಳೂರು ಬೆಳಗ್ಗೆ 06:00(ಮೆಜೆಸ್ಟಿಕ್‌, ಕೆಂಪೇಗೌಡ ಬಸ್ ನಿಲ್ದಾಣ) ಸಂಜೆ 07:00 ಗಂಟೆಗೆ 380 ಕಿ.ಮೀ 2,500 ರೂ.

ಅಶ್ವಮೇಧ ಬಸ್  : ಬೆಂಗಳೂರು – ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ – ದೇವಿಗೆರೆ ಕಲ್ಯಾಣಿ – ಬೆಂಗಳೂರು ಬೆಳಗ್ಗೆ 06:00(ಮೆಜೆಸ್ಟಿಕ್, ಕೆಂಪೇಗೌಡ ಬಸ್ ನಿಲ್ದಾಣ) ಸಂಜೆ 08:00 ಗಂಟೆಗೆ 380 ಕಿ.ಮೀ 2,000 ರೂ.

ಬಂಟ್ವಾಳ : ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ, ಉಸಿರುಗಟ್ಟಿ ಬಾಲಕ ಸಾವು – vishwanews24

ಮೈಸೂರಿನಿಂದ ಹಾಸನಾಂಬ ಪ್ಯಾಕೇಜ್ ವಿವರ
ಬಸ್ ವಿಧ ಮಾರ್ಗ, ಸ್ಥಳಗಳು ಹೊರಡುವ ಸಮಯ, ಸ್ಥಳ ಹಿಂದಿರುಗುವ ಸಮಯ ಒಟ್ಟು ದೂರ ಟಿಕೆಟ್ ದರ (ಪ್ರತಿ ವ್ಯಕ್ತಿಗೆ)

ಐರಾವತ (ವೋಲ್ವೋ) : ಮೈಸೂರು – ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ – ದೇವಿಗೆರೆ ಕಲ್ಯಾಣಿ – ಹೊಳೆನರಸೀಪುರ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ – ಮೈಸೂರು ಬೆಳಗ್ಗೆ 06:00(ಮೈಸೂರು ಕೇಂದ್ರೀಯ ಬಸ್ ನಿಲ್ದಾಣ) ಸಂಜೆ 07:00 ಗಂಟೆಗೆ 250 ಕಿ.ಮೀ 2,000 ರೂ.

ಅಶ್ವಮೇಧ ಬಸ್ :ಮೈಸೂರು – ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ – ದೇವಿಗೆರೆ ಕಲ್ಯಾಣಿ – ಹೊಳೆನರಸೀಪುರ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ – ಮೈಸೂರು ಬೆಳಗ್ಗೆ 06:00(ಮೈಸೂರು ಕೇಂದ್ರೀಯ ಬಸ್ ನಿಲ್ದಾಣ) ಸಂಜೆ 08:00 ಗಂಟೆಗೆ 250 ಕಿ.ಮೀ 1,600 ರೂ.

ಟೂರ್ ಪ್ಯಾಕೇಜ್ ಪ್ರಮುಖ ಅಂಶಗಳು
ವಿಶೇಷ ದರ್ಶನ ಟಿಕೆಟ್: ಪ್ರತಿಯೊಂದು ಪ್ಯಾಕೇಜ್ ದರದಲ್ಲೂ ದೇವಸ್ಥಾನದ 1,000 ರೂ. ಅಧಿಕೃತ ವಿಶೇಷ ಪ್ರವೇಶ/ದರ್ಶನ ಟಿಕೆಟ್ ಒಳಗೊಂಡಿದೆ.
ಊಟ ಹಾಗೂ ಇತರೆ ವೆಚ್ಚ: ಊಟೋಪಹಾರ ಹಾಗೂ ದೇವಾಲಯಗಳಲ್ಲಿನ ಇತರ ಪ್ರವೇಶ ಶುಲ್ಕಗಳನ್ನು ಪ್ರಯಾಣಿಕರೇ ಪ್ರತ್ಯೇಕವಾಗಿ ಭರಿಸಬೇಕಾಗುತ್ತದೆ.

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ : ಹಲವರಿಗೆ ಗಾಯ – vishwanews24

ಮಕ್ಕಳಿಗೆ ರಿಯಾಯಿತಿ: ಮಕ್ಕಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ.
ಪ್ರವಾಸದ ಅವಧಿ: ಅಕ್ಟೋಬರ್ 30 ರಿಂದ ನವೆಂಬರ್ 10 ರವರೆಗೆ ಈ ವಿಶೇಷ ಪ್ಯಾಕೇಜ್ ಲಭ್ಯವಿರುತ್ತದೆ.

ಬುಕಿಂಗ್ ಮತ್ತು ಮಾಹಿತಿಗಾಗಿ ಸಂಪರ್ಕಿಸಿ
ದೂರವಾಣಿ ಸಂಖ್ಯೆಗಳು: 7760990518, 7760990519, 7760990520, 7760990523
ಕಾಲ್ ಸೆಂಟರ್ ಸಂಖ್ಯೆ: 080 2625 2625
ಅಧಿಕೃತ ವೆಬ್‌ಸೈಟ್‌: http://www.ksrtc.in

Leave a Reply