ಉಡುಪಿ

ಹಿರಿಯರನ್ನು ನೆನಪಿಸುವುದು ಸನಾತನ ಹಿಂದೂ ಸಂಸ್ಕೃತಿ ಹಾಗೂ ಅಮ್ಮನನ್ನು ಬ್ರಹ್ಮನನ್ನು ಕಾಣುವುದು ಭಾರತೀಯ ಸಂಸ್ಕೃತಿ:- ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ: Vishwanews24

ಹಿರಿಯರನ್ನು ನೆನಪಿಸುವುದು ಸನಾತನ ಹಿಂದೂ ಸಂಸ್ಕೃತಿ ಹಾಗೂ ಅಮ್ಮನನ್ನು ಬ್ರಹ್ಮನನ್ನು ಕಾಣುವುದು ಭಾರತೀಯ ಸಂಸ್ಕೃತಿ:- ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ: Vishwanews24

ಕಾಪು: ಪಾಂಗಾಳ ಆರ್ಯಾಡಿ ಸುಬ್ಬಣ್ಣ ಶೆಟ್ಟಿ ಮನೆ ,ದಿ/ ಪಿ.ಕೆ. ಸಂಜೀವ ಶೆಟ್ಟಿಯವರ ಧರ್ಮಪತ್ನಿ ದಿವಂಗತ ಕೃಷ್ಣ ಶೆಡ್ತಿ ಇವರ 15ನೇ ವರುಷದ ಪುಣ್ಯಸ್ಮರಣಾ ಕಾರ್ಯಕ್ರಮ ಆದಿತ್ಯವಾರ ಆರ್ಯಾಡಿ, ಪಾಂಗಾಳದಲ್ಲಿ ನಡೆಯಿತು.

ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕೇಮಾರು ಸಾಂದಿಪನಿ ಸಾಧನಾಶ್ರಮ ಇವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ಮಾಡುತ್ತಾ” ಹಿರಿಯರನ್ನು ನೆನಪಿಸುವುದು ಸನಾತನ ಹಿಂದೂ ಸಂಸ್ಕೃತಿ ಹಾಗೂ ಅಮ್ಮನನ್ನು ಬ್ರಹ್ಮನನ್ನು ಕಾಣುವುದು ಭಾರತೀಯ ಸಂಸ್ಕೃತಿಯಾಗಿದೆ ಪ್ರತಿಯೊಬ್ಬ ಸಾಧಕನ‌ ಹಿಂದೆ ತಾಯಿಯ ಪಾತ್ರ ಮಹತ್ವದ್ದಾಗಿದೆ ಇದು ಪುರಾಣದಲ್ಲಿಯೂ ಉಲ್ಲೇಖಿಸಿದ ವಿಚಾರವಾಗಿದೆ.
ತಾಯಿಯ ಪ್ರೀತಿಯ ಬಗ್ಗೆ ಉದ್ದ ಎಷ್ಟು ಅಗಲ ಎಷ್ಟು ಎಂಬುದನ್ನು ಅಳತೆ ಮಾಡಲು ಸಾಧ್ಯವೇ ಇಲ್ಲ ಹಾಗಾಗಿ ತಾಯಿಯೇ ನಿಜವಾದ ದೇವರು ಎಂದರು.

ಕಾಪುವಿನ ಶಾಸಕ ಲಾಲಾಜಿ. ಆರ್. ಮೆಂಡನ್ ಮಾತನಾಡಿ ” ಅಮ್ಮಂದಿರ ದಿನದಂದು ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು ಇದರ ಜತೆಗೆ ಅಶಕ್ತರನ್ನ ಗುರುತಿಸಿ ಸಹಕರಿಸಿರುವುದು ಇಹಲೋಕದ ದಿ.ಕೃಷ್ಣಿ ಶೆಟ್ಟಿ ಅವರಿಗೆ ವಿಶೇಷವಾಗಿ ನೀಡುತ್ತಿರುವ ಗೌರವ ಹಾಗೂ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು, ಕರಾವಳಿ ಅಧ್ಯಕ್ಷ ಪ್ರಾಧಿಕಾರ ,ಶ್ರೀ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವರು, ಕರ್ನಾಟಕ ಸರಕಾರ, ಶ್ರೀಮತಿ ಮಲ್ಲಿಕಾ ಆಚಾರ್ಯ, ಅಧ್ಯಕ್ಷರು, ಇನ್ನಂಜೆ ಗ್ರಾಮ ಪಂಚಾಯತ್ , ಉದ್ಯಮಿ ಅಶೋಕ್ ಶೆಟ್ಟಿ ,ಶ್ರೀ ಪ್ರಕಾಶ್ ಶೆಟ್ಟಿ, “ಸಂಜೀವಿನಿ, ಸುಬ್ಬಣ್ಣ ಶೆಟ್ಟಿ ಮನೆ, ಆರ್ಯಾಡಿ ,ಗೋವಿಂದ ಶೆಟ್ಟಿ, ಯೋಗಿಶ ಶೆಟ್ಟಿ, ದಿನೇಶ್ ಶೆಟ್ಟಿ, ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.

ಸನ್ಮಾನ- ಹರೀಶ್ ಪೂಜಾರಿ, ದಿನಕರ ಬಾಬು,ಸುಧಾಕರ ಪೂಜಾರಿ, ಪೆನ್ವೇಲ್ ಸೋನ್ಸ್ ಇವರಿಗೆ ವೇದಿಕೆಯಲ್ಲಿ ಗೌರವದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಆಸರೆ ವೃದ್ಧಾಶ್ರಮಕ್ಕೆ ಇಪ್ಪತೈದು ಸಾವಿರ ರೂಪಾಯಿಯ ಧನ ಸಹಾಯ ಮಾಡಲಾಯಿತು.

Vishwa News 24

Recent Posts

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

28 minutes ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

37 minutes ago

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…

53 minutes ago

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ – vishwanews24

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ ಕೊಪ್ಪಳ: ಗೂಡ್ಸ್‌ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…

1 hour ago

ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು – vishwanews24

ಮಲ್ಪೆ ಪ್ರಕರಣ: ಪ್ರಮೋದ್ ಮಧ್ವರಾಜ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದು ಬೆಂಗಳೂರು: ಕಳೆದ ವರ್ಷ ಮಲ್ಪೆ ಬಂದರಿನಲ್ಲಿ ಕಳ್ಳತನ ಮಾಡಿ…

1 hour ago

ರಾಮಮಂದಿರ ದೇಣಿಗೆ ಅವ್ಯವಹಾರ: SIT ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ : ಪೇಜಾವರ ಶ್ರೀ – vishwanews24

ರಾಮ ಮಂದಿರದಲ್ಲಿ ಅವ್ಯವಹಾರದಂತಹ ಘೋರ ಅಪಚಾರಗಳು ನಡೆಯಬಾರದಿತ್ತು.. ಮಂದಿರದ ಅವ್ಯವಹಾರ ಆರೋಪಗಳು ಸತ್ಯವಾಗಿದ್ದರೆ, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು : ಪೇಜಾವರ…

1 hour ago