ರಾಜ್ಯ ನ್ಯೂಸ್

ಹೀರೋ’ ಆಗಿದ್ದ ಸಿದ್ದರಾಮಯ್ಯ ಈಗ ‘ಝೀರೊ’ ನಿಜವಾಯ್ತು ಯಡಿಯೂರಪ್ಪನವರ ಮಾತು

ಕರ್ನಾಟಕದ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ದಿನ ಭಾರತೀಯ ಜನತಾ ಪಕ್ಷವನ್ನು ಕನ್ನಡಿಗರು ಅತ್ಯಂತ ದೊಡ್ಡ ಪಕ್ಷವನ್ನಾಗಿ ಹೊರಹೊಮ್ಮಿಸಿದ್ದರು. ನಿರೀಕ್ಷೆಯಂತೆ ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಾದು ಕುಳಿತಿದ್ದರು. ಅದರಂತೆ ಯಡಿಯೂರಪ್ಪನವರು ಮುಖ್ಯಮಂತ್ರಿಯೂ ಆದರು. ಆದರೆ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾ ದಳ ಅಧಿಕಾರಕ್ಕಾಗಿ ಒಂದುಗೂಡಿ ಯಡಿಯೂರಪ್ಪರವರನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾದರು.

ಯಡಿಯೂರಪ್ಪನವರು ಹಿಂದೆ ಮುಂದೆ ನೋಡದೆ ರಾಜೀನಾಮೆ ನೀಡಿ ವಿರೋಧ ಪಕ್ಷದಲ್ಲಿ ಕೂರಲು ನಾವು ಸಿದ್ಧರಿದ್ದೇವೆ ಎಂದು ಸಾರಿದರು. ಅದರಂತೆಯೇ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಅಲಂಕರಿಸಿದರು. ಆ ನಂತರ ಎಚ್ ಡಿ ಕುಮಾರಸ್ವಾಮಿ ಹಾಗೂ ಜಿ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಅಸ್ತಿತ್ವಕ್ಕೆ ಬಂದ ಹದಿನೈದು ದಿನಗಳು ಕಳೆದರೂ ಸಚಿವ ಸಂಪುಟ ರಚಿಸಲಾಗಿದೆ ನಾಯಕರುಗಳು ಹೈರಾಣಾಗಬೇಕಾಯಿತು. ಇಂದು ಅಧಿಕೃತವಾಗಿ ಇಪ್ಪತ್ತೈದು ಶಾಸಕರುಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಆದರೆ ಈಗಾಗಲೇ ಭಿನ್ನಾಭಿಪ್ರಾಯ-ಅಸಮಾಧಾನ ಸ್ಫೋಟಗೊಂಡಿದ್ದು ಯಾವುದೇ ಕ್ಷಣದಲ್ಲಾದರೂ ಸರಕಾರಕ್ಕೆ ತಿರುಗುಬಾಣ ವಾಗಬಹುದಾಗಿದೆ. ಆದರೆ ಅಂದು ಯಡಿಯೂರಪ್ಪನವರು ವಿರೋಧ ಪಕ್ಷದ ನಾಯಕನಾಗಿ ಆಯ್ಕೆಗೊಂಡಾಗ ವಿಧಾನಸಭೆಯಲ್ಲಿ ಒಂದು ಮಾತನ್ನು ಹೇಳಿದ್ದರು. ಇಂದು ಬಿಜೆಪಿಯನ್ನು ದೂರವಿಡಲು ನೀವು ಅಪ್ಪ ಮಕ್ಕಳ ಜಾತ್ಯತೀತ ಜನತಾ ದಳದ ಜೊತೆಗೆ ಕೈಜೋಡಿಸಿದ್ದೀರಿ. ಆದರೆ ನೆನಪಿರಲಿ ಅವರು ನಿಮ್ಮನ್ನು ಬೆಳೆಯಲು ಬಿಡುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮನ್ನು ಮೂಲೆಗುಂಪು ಮಾಡುತ್ತಾರೆ ಎಂದು ವಿಧಾನಸಭೆಯಲ್ಲಿ ಅಬ್ಬರಿಸಿದ್ದರು.

ಅಂದು ಹಲವು ಶಾಸಕರುಗಳು ಯಡಿಯೂರಪ್ಪನವರ ಮಾತಿಗೆ ವಿಧಾನಸಭೆಯಲ್ಲಿ ನಗೆಯಾಡಿದ್ದರು. ಆದರೆ ಇಂದು ಅಕ್ಷರಶಃ ಯಡಿಯೂರಪ್ಪನವರ ಮಾತು ಸತ್ಯವಾಗಿದೆ. ಮೈತ್ರಿ ಸರಕಾರದ ರಚನೆ ವೇಳೆ ‘ಹೀರೋ’ ಎನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ‘ಝೀರೊ’ ಎನಿಸಿಕೊಂಡಿದ್ದಾರೆ. ಸ್ವತಃ ತಮ್ಮ ಪುತ್ರನಿಗೂ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಡಿಸಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಇನ್ನು ತಮ್ಮ ಆಪ್ತ ಶಾಸಕರುಗಳಿಗೆ ಮಂತ್ರಿ ಸ್ಥಾನ ಕೊಡಿಸುದಕ್ಕೆ ಸಿದ್ದರಾಮಯ್ಯನವರಿಗೆ ಸಾಧ್ಯವಾಗಿಲ್ಲ.

ಹೈಕಮಾಂಡ್ ನೂತನ ಸಚಿವರುಗಳ ಆಯ್ಕೆ ಮಾಡುವಾಗ ಸಂಪೂರ್ಣವಾಗಿ ಸಿದ್ದರಾಮಯ್ಯನವರನ್ನು ನಿರ್ಲಕ್ಷಿಸಿದೆ ಎಂದು ಹೇಳಲಾಗುತ್ತಿದೆ. ಇಂದು ಅಧಿಕಾರ ಸ್ವೀಕರಿಸಿರುವ ಸಚಿವರುಗಳಲ್ಲಿ ಸಿದ್ದರಾಮಯ್ಯನವರ ಕುರುಬ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. ಸಿದ್ದರಾಮಯ್ಯನವರ ಪರವಾಗಿ ಕುರುಬ ಸಮಾಜ ಅಂದು ನಿಂತಿತ್ತು.ಆದರೆ ಇಂದು ಅದೇ ಕುರುಬ ಸಮಾಜವನ್ನು ಕಾಂಗ್ರೆಸ್ ನ ಹೈಕಮಾಂಡ್ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅವರಿಗೆ ಸಿಗಬೇಕಾಗಿದ್ದ ಪ್ರಾತಿನಿಧ್ಯವನ್ನೂ ನೀಡಿಲ್ಲ.

ಇನ್ನು ಸಿದ್ದರಾಮಯ್ಯನವರು ನಂಬಿಕೊಂಡು ಬಂದಿದ್ದಂತಹ ನಾಯಕರುಗಳು ಕೂಡ ಸಚಿವ ಸಂಪುಟದಿಂದ ಹೊರ ಬಿದ್ದಿದ್ದು ಸಿದ್ದರಾಮಯ್ಯನವರಿಗೆ ತೀವ್ರ ಹಿನ್ನಡೆಯುಂಟಾಗಿದೆ. ಜೊತೆ ಜೊತೆಗೆ ನಾಳೆ ರಾಜ್ಯಾದ್ಯಂತ ಹಾಲುಮತ ಸಮುದಾಯ ಪ್ರತಿಭಟನೆಗೆ ಕರೆ ಕೊಟ್ಟಿದೆ. ಒಟ್ಟಾರೆ ಒಂದು ಕಾಲದಲ್ಲಿ ರಾಜನಂತೆ ಮೆರೆದಿದ್ದಂತಹ ಸಿದ್ದರಾಮಯ್ಯನವರು ಇಂದು ಸಂಪೂರ್ಣ ಮೂಲೆಗುಂಪಾಗಿದ್ದಾರೆ. ಯಡಿಯೂರಪ್ಪನವರು ವಾರದ ಹಿಂದಷ್ಟೇ ಹೇಳಿದ್ದ ಮಾತು ಅಕ್ಷರಶಃ ನಿಜವಾಗಿದೆ.

Vishwa News 24

Recent Posts

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

21 hours ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

1 day ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago

ಮಂಗಳೂರು : ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ – vishwanews24

ಪ್ರಧಾನಿ ಮೋದಿ ಹೇಳಿಕೆ ಬಾಲಿಶತನದ್ದು, ಇಂತಹ ಹೇಳಿಕೆಯನ್ನು ಈ ದೇಶದ ಜನತೆ ಯಾವತ್ತೂ ನಿರೀಕ್ಷೆ ಮಾಡಲ್ಲ: ಮಂಜುನಾಥ ಭಂಡಾರಿ ಮಂಗಳೂರು…

2 days ago

ಮೂಳೂರು ಪರಿಸರದಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಿಸದಂತೆ ಅಧಿಕಾರಿಗಳಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ – vishwanews24

ಮೂಳೂರು: ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಪ್ರತಿಭಟನೆ.. STP ತಕ್ಷಣವೇ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ…

2 days ago