ಹೃದಯಾಘಾತದಿಂದ ರಂಗಸ್ಥಳದಲ್ಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ -Vishwanews24
ಕೊಲ್ಲೂರು : ಯಕ್ಷಗಾನ ನಡೆಯುತ್ತಿರುವ ವೇಳೆ ಹೃದಯಾಘಾತದಿಂದ ರಂಗಸ್ಥಳದಲ್ಲೇ ಕುಸಿದು ಬಿದ್ದ ಕಲಾವಿದ ಚಂದ್ರಹಾಸ ಹುಡಗೋಡು ನಿಧನರಾಗಿದ್ದಾರೆ.
ಕೊಲ್ಲೂರು ಸಮೀಪದ ಯಳಜಿತ್ ನಲ್ಲಿ ಭಾನುವಾರ ರಾತ್ರಿ 11.30 ರ ಸುಲಾಧರ ಮೇಳ ಭೀಷ್ಮ ವಿಜಯ ಎಂಬ ಯಕ್ಷಗಾನ ಮಾಡುತ್ತಿದ್ದರು. ಇದೆ ವೇಳೆ ಸಲ್ವಾನಾಗಿ ಅಭಿನಯಿಸುತ್ತಿದ್ದ ಚಂದ್ರಹಾಸರು ಕುಸಿದು ಬಿದ್ದರು. ಅವರನ್ನು ತಕ್ಷಣವೇ ಬೈಂದೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅದಾಗಲೇ ಅವರು ರಂಗಸ್ಥಳದಲ್ಲಿ ಪ್ರಾಣ ತ್ಯಾಗ ಮಾಡಿದ್ದರು.
ಅಭಿನವ ಸಾಲ್ವ ಎಂಬ ಬಿರುದಾಂಕಿತ ಚಂದ್ರಹಾಸ ಹುಡುಗೋಡು ಅವರು ಹೊನ್ನಾವರದ ಯಕ್ಷರಂಗಳ ಬಳಗ ಎಂಬ ಮೇಳದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದರು. ಇವರ ಅಕಾಲಿಕ ಮರಣಕ್ಕೆ ಯಕ್ಷಲೋಕವೇ ಕಂಬನಿ ಮಿಡಿದಿದೆ.
